ನನಗೇ ಕನ್ನಡ ಗೋತ್ತೇ ಇಲ್ಲವೆಂದ ಸಾಯಿ ಪಲ್ಲವಿ! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಚುರಲ್‌ ಬ್ಯೂಟಿ!!

ವಿವಾದಗಳಿಂದ ಬಹುದೂರವಿರುವ ನಟಿ ಸಾಯಿ ಪಲ್ಲವಿ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತ ಕೆಲಸವೊಂದನ್ನು ಮಾಡಿದ್ದಾರೆ.

Advertisement

ಕನ್ನಡದ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟನೆ ಮಾಡಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಕನ್ನಡದ ಇಂಟರ್‌ವ್ಯೂನಲ್ಲಿ ಭಾಗಿಯಾಗಿದ್ದರು. ಒಂದೆರಡು ಪದಗಳಾದರೂ ಕನ್ನಡ ಬರುತ್ತದೆ ಎನ್ನುವುದು ಫ್ಯಾನ್ಸ್‌ ನಿರೀಕ್ಷೆಯಾಗಿತ್ತು. ಆದರೆ ಇಂಟರ್‌ವ್ಯೂ ಒಂದರಲ್ಲಿ ನನಗೆ ಕನ್ನಡ ಗೊತ್ತೇ ಇಲ್ಲ ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.

Advertisement
Advertisement

ಸಂದರ್ಶಕರು ವಿವಿಧ ಭಾಷೆಗಳ ಬಗ್ಗೆ ಮಾತನಾಡುತ್ತಾ ಕನ್ನಡದ ಪ್ರಸ್ತಾಪ ತಂದಾಗ, ನಟಿ ಸಾಯಿ ಪಲ್ಲವಿ ಕಡೆಗಣಿಸುವ ರೀತಿಯಲ್ಲಿ ಉತ್ತರಿಸಿದ್ದಾರೆ ಎಂಬುದು ಅಭಿಮಾನಿಗಳು ಮತ್ತು ನೆಟ್ಟಿಗರ ವಾದವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತಮಗೆ ಇಷ್ಟವಾದ ಭಾಷೆಯನ್ನು ಆರಿಸಿಕೊಳ್ಳುವ ಮತ್ತು ಮಾತನಾಡುವ ಸ್ವಾತಂತ್ರ್ಯ ಸಂಪೂರ್ಣವಾಗಿ ಇದೆ. ಆದಾಗ್ಯೂ, ಕನ್ನಡದಂತಹ ಸಮೃದ್ಧ ಭಾಷೆಯ ವಿಷಯ ಬಂದಾಗ ಅವರು ತೋರಿದ ಧೋರಣೆ ಮತ್ತು ಪ್ರತಿಕ್ರಿಯೆಯು ಸ್ವಲ್ಪ ಅಹಂಕಾರದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಮುಂದುವರಿದಿವೆ. ಇನ್ನೂ ಕೆಲವರು ಸಾಯಿ ಪಲ್ಲವಿ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಆ ಭಾಷೆಯ ಟಚ್ ಇದ್ದು, ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಹೀಗಾಗಿ, ಅದರ ಟಚ್ ಇಲ್ಲದಿರಬಹುದು ಎನ್ನುವ ವಾದ ಮುಂದಿಟ್ಟಿದ್ದಾರೆ.

ಸಾಯಿ ಪಲ್ಲವಿ ಮನೆಯಲ್ಲಿ ಬಡಗ ಭಾಷೆಯಲ್ಲಿ ಮಾತನಾಡುತ್ತಾರೆ. ಇದಕ್ಕೂ ಕನ್ನಡಕ್ಕೂ ಸ್ವಲ್ಪ ಸಾಮ್ಯತೆ ಇದೆ. ಹೀಗಿದ್ದರೂ ಕನ್ನಡ ಕಷ್ಟ ಎನ್ನುವ ರೀತಿಯಲ್ಲಿ ಗೊತ್ತಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನುವುದು ನೆಟ್ಟಿಗರ ವಾದವಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page