ಉಪ್ಪಿನಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ವೇಷಭೂಷಣದ ಮೂಲಕ ಗಮನ ಸೆಳೆಯುತ್ತಿರುವ 9 ವರ್ಷದ ಬಾಲಕ ಸಂಪದ್ ಶೆಣೈ, ಉಪ್ಪಿನಂಗಡಿ ದಸರಾ ಸಂದರ್ಭದಲ್ಲಿ ದೇವಿಯ ವೇಷ ಧರಿಸಿ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಸಾಂಪ್ರದಾಯಿಕ ಸೀರೆಯುಟ್ಟು, ಸುಂದರವಾದ ಮೊಗ್ಗಿನ ಜಡೆಯೊಂದಿಗೆ ದೇವಿಯ ರೂಪದಲ್ಲಿ ಕಂಗೊಳಿಸಿರುವ ಸಂಪದ್‌ನ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಪುಟ್ಟ ವಯಸ್ಸಿನಲ್ಲಿಯೇ ಇಂತಹ ವಿಶಿಷ್ಟ ವೇಷದ ಮೂಲಕ ತನ್ನದೇ ಆದ ಗುರುತನ್ನು ಮೂಡಿಸಿಕೊಳ್ಳುತ್ತಿರುವ ಸಂಪದ್, ಉಪ್ಪಿನಂಗಡಿ ಪರಿಸರದಲ್ಲಿ ಜನರ ಕುತೂಹಲಕ್ಕೂ ಕಾರಣವಾಗಿದ್ದಾನೆ ಎಂದರೇ ಖಂಡಿತಾ ತಪ್ಪಾಗಲಾರದು.
ಸಾಂಪ್ರದಾಯಿಕ ಉಡುಗೆ, ದೇವಿಯ ಅಲಂಕಾರ ಹಾಗೂ ಮೊಗ್ಗಿನ ಜಡೆಯ ಸೊಬಗು ಸಂಪದ್‌ನ ವೇಷಕ್ಕೆ ವಿಶೇಷ ಮೆರುಗು ನೀಡಿವೆ. ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ರೀಲ್ಸ್, ಜನರಿಂದ ಹೆಚ್ಚು ವೀಕ್ಷಣೆಯ ಜೊತೆಗೆ ಮೆಚ್ಚುಗೆ ಗಳಿಸುತ್ತಿದ್ದು, ಬಾಲಕನ ವಿಭಿನ್ನ ಪ್ರಯತ್ನಕ್ಕೆ ಭರಪೂರ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪುಟ್ಟ ವಯಸ್ಸಿನಲ್ಲಿಯೇ ವಿಭಿನ್ನ ಪ್ರಯತ್ನದ ಮೂಲಕ ಗಮನ ಸೆಳೆಯುತ್ತಿರುವ ಸಂಪದ್ ಶೆಣೈ, ಉಪ್ಪಿನಂಗಡಿ ದಸರಾ ಸಂಭ್ರಮದ ವಿಶೇಷ ಆಕರ್ಷಣೆಯಾಗಿದ್ದಾನೆ.














