ಮಂಗಳೂರಿನ ಎಂಆರ್ಪಿಎಲ್ನಲ್ಲಿ ಸಂಭವಿಸಿದ್ದ ಭಾರೀ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿ ಹಲವರಿಗೆ ಗಾಯಗಳಾಗಿತ್ತು. ಇದರ ಕುರಿತಾಗಿ ಪರಿಹಾರಕ್ಕೆ ಆಗ್ರಹಿಸಿ ಎಂಆರ್ಪಿಎಲ್ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಸಹಿತ ಅನೇಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಎಂಆರ್ಪಿಎಲ್ ಅನ್ನು ‘ಜೀವಂತ ಜ್ವಾಲಾಮುಖಿ’ಯಂತೆ ಮಡಿಲಲ್ಲಿ ಇಟ್ಟುಕೊಂಡು ಜನರು ಬದುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂತಹ ಕೈಗಾರಿಕಾ ಘಟಕಗಳಲ್ಲಿ ಸುರಕ್ಷತೆ ಹಾಗೂ ಜನರ ಜೀವದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಘಟನೆಯ ಬಳಿಕ ಮೃತ ಕಾರ್ಮಿಕ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದ್ದ ಸತ್ಯಜಿತ್ ಅವರು ಸಂಸ್ಥೆ ನೀಡಿದ ಪರಿಹಾರವನ್ನು ಸ್ವಾಗತಿಸಿದ್ದರು.
ನಂತರ ನಡೆದ ಬೆಳವಣಿಗೆಗಳಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ಸತ್ಯಜಿತ್ ಸುರತ್ಕಲ್ ಅವರ ಹೋರಾಟವನ್ನು ಅವಕಾಶದ ಸಂಘರ್ಷದ ಜೊತೆಗೆ ಬಿಜೆಪಿ ವಿರುದ್ಧದ ಹೋರಾಟ ಎಂದು ಮಾಧ್ಯಮದಲ್ಲಿ ಬರೆದುಕೊಂಡಿದ್ದರು.
ಈ ಕುರಿತು ಇದೀಗ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸತ್ಯಜಿತ್ ಸುರತ್ಕಲ್ ಮಾತನಾಡಿ, ನವೀನ್ ಸೂರಿಂಜೆ ಹೇಳಿರುವ ಹಾಗೇ ಸಂಸ್ಥೆಯ ಪರವಾಗಿ ನಿಂತು ಸ್ಥಳಿಯರನ್ನು ಒಕ್ಕಲೆಬ್ಬಿಸುವ ಕೆಲಸ, ಸ್ಥಳದ ವಿಚಾರ, ನೆಲ್ಲಿದಡಿ ಗುತ್ತುವಿನ ವಿಚಾರ ಯಾವ ವಿಚಾರದಲ್ಲಿಯೂ ನನ್ನ ಹಸ್ತಕ್ಷೇಪ ಅಥವಾ ಬೆಂಬಲ ಯಾವುದೇ ಕಾರಣಕ್ಕೂ ಇರಲಿಲ್ಲ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಹಿಂದೂ ಜಾಗರಣ ವೇದಿಕೆಯ ಸಂಘಟಕನಾ ಜವಾಬ್ದಾರಿ ಇರುವ ಕೆಲವರು ನನ್ನ ಗಮನಕ್ಕೆ ತರದೆ ಕೆಲವು ಘಟನೆಗಳಲ್ಲಿ ಭಾಗಿಯಾಗಿರಲೂಬಹುದು. ಇಲ್ಲವೇ ಇಲ್ಲ ಎಂದು ನಾನು ಯಾವತ್ತೂ ಹೇಳುವುದಿಲ್ಲ. ಆದರೆ ನನ್ನ ಗಮನಕ್ಕೆ ಬಂದ ತಕ್ಷಣ ಅವರನ್ನು ತಡೆದು ಅ ಕೆಲಸದಿಂದ ಅವರನ್ನು ವಾಪಾಸ್ ಕಳಿಸುವ ವ್ಯವಸ್ಥೆ ನಾನು ಮಾಡಿದ್ದೇನೆಯೇ ಹೊರತು ಅದಕ್ಕೆ ಕುಮ್ಮಕ್ಕು ನೀಡುವ ಕೆಲಸ ಯಾವತ್ತೂ ಮಾಡಿಲ್ಲ.
ನವೀನ್ ಸೂರಿಂಜೆ ಅವರು ತಿಳಿಸಿರುವಂತೆ ಯಾರು ಬೇಕಾದರೂ ಎಲ್ಲಿಯಾದರೂ ಬರಳಿ ನಾನು ಮುಖಾಮುಖಿ ಚರ್ಚೆಗೆ ತಯಾರಿದ್ದೇನೆ . ಅದೇ ರೀತಿ ಬಹುಶಃ ಯಾವುದೇ ಕಾರಣಿಕ ಜಾಗದಲ್ಲಿ ಪ್ರಮಾಣ ಮಾಡುವುದಿದ್ದರೂ ಕೂಡ ನಾನು ಸಿದ್ಧನಿದ್ದೇನೆ. MRPL ಸಂಸ್ಥೆಯ ವಿರುದ್ಧ ನಾನು 30 ವರ್ಷದ ಹಿಂದೆ ಸಂಸ್ಥೆಯ ಪ್ರಾರಂಭದಲ್ಲಿ ಮೂರು ದಿವಸದ ನೀರು ಬಿಡುವ ವಿಷಯದಲ್ಲಿ ಪ್ರತಿಭಟನೇ ಆಗುವಾಗಲೂ ಭಾಗವಹಿಸಿದ್ದೇನೆ. ಪ್ರಾರಂಭದಿಂದಲೂ ಕಾರ್ಮಿಕರ ಸಮಸ್ಯೆಗೆ ದ್ವನಿಯಾಗಿ ಅವರ ಸಮಸ್ಯೆಯನ್ನು ನಿವಾರಿಸಿದ್ದೇನೆ. ಈಗಲೂ ನಾನು ಕಾರ್ಮಿಕರ ಸಂಘಟನಾ ಜವಾಬ್ದಾರಿಯಿಂದ ಬಂದಿದ್ದೇನೆ ಹೊರತು ಬೇರೆ ಯಾವುದೇ ರಾಜಕೀಯ ಕಾರಣಕ್ಕೂ ಅಲ್ಲ. ಅದು ಸತ್ಯಕ್ಕೆ ಸಂಪೂರ್ಣ ದೂರವಾದ ಮಾತು ಎಂದು ಸ್ಪಷ್ಟವಾಗಿ ಹೇಳುತ್ತೇನೆ ಮತ್ತು ಕಾರ್ಮಿಕರ ವಿಚಾರದಲ್ಲಿ ಯಾವೂದೇ ಕಾರಣಕ್ಕೂ ನಾನು ರಾಜಿಯಾಗುವುದಿಲ್ಲ ಅವರ ಹೋರಾಟಕ್ಕೆ ಯಾವಾಗಲೂ ಜೊತೆಯಾಗಿರುತ್ತೇನೆ ಎಂದು ಸ್ಪಷ್ಟವಾಗಿ ಈ ಮೂಲಕ ಹೇಳುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕರ ಜೀವನಕ್ಕೆ MRPL ಮಾರಕವಾಗದೆ ಪೂರಕವಾಗಿರಲಿ ಎಂಬುದೇ ಜನರ ಆಶಯ.














