ಸಿದ್ಧಕಟ್ಟೆ ಬಳಿ ಯುವಕನಿಗೆ ಚೂರಿ ಇರಿತ! ಮೇಲುಗುಡ್ಡೆ ನಿವಾಸಿ ಪ್ರಕಾಶ್ ಪೂಜಾರಿಗೆ ಗಂಭೀರ ಗಾಯ!!

ಸಿದ್ಧಕಟ್ಟೆ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾತ್ರಿ ನಡೆದಿದೆ. ಪರಿಚಿತ ಯುವಕರ ತಂಡವೇ ಈ ಕೃತ್ಯ ಎಸಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಕಟ್ಟೆ ಸಮೀಪದ ಮಂಚಕಲ್ಲು ಮೇಲುಗುಡ್ಡೆ ನಿವಾಸಿ ಪ್ರಕಾಶ್ ಪೂಜಾರಿ (30) ಚೂರಿ ಇರಿತಕ್ಕೊಳಗಾದ ಯುವಕ.

Advertisement

ರಾತ್ರಿ ವೇಳೆ ಪ್ರಕಾಶ್ ಪೂಜಾರಿ ಅವರ ಮೇಲೆ ಸ್ಥಳೀಯ ಯುವಕರ ತಂಡವೊಂದು ಏಕಾಏಕಿ ಚೂರಿಯಿಂದ ದಾಳಿ ನಡೆಸಿದೆ. ಘಟನೆಯಲ್ಲಿ ಪ್ರಕಾಶ್ ಅವರ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಾಳು ಪ್ರಕಾಶ್ ಪೂಜಾರಿ ಅವರನ್ನು ಚಿಕಿತ್ಸೆಗಾಗಿ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page