ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಎಸ್ಐಟಿ ಕಚೇರಿಯನ್ನು ಪರಿಶೀಲನೆ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಎಸ್ಐಟಿ ಕಛೇರಿಯನ್ನು ಕು. ಸೌಜನ್ಯ ಪ್ರಕರಣದ ಎಸ್ಐಟಿ ಅಧಿಕಾರಿಗಳಾದ ನಿಶಾ ಜೇಮ್ಸ್ ಐಪಿಎಸ್ ಮತ್ತು ಲೋಕೇಶ್ ಜಗಲಸಾರ್ ಐಪಿಎಸ್ ಅವರು ಅ. 1ರಂದು ಬೆಳಗ್ಗೆ 10:30 ಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕಟ್ಟಡದಲ್ಲಿರುವ ಎರಡು ಕೊಠಡಿಯನ್ನು ತನಿಖೆಗಾಗಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.














