ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಎನ್. ಸುಬ್ರಮಣ್ಯಂ ಕೊಳತ್ತಾಯ ಅವರ ಸ್ಮರಣಾರ್ಥವಾಗಿ, ತಾಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಹಾಗೂ ‘ನುಡಿ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಈ ಭಾವಪೂರ್ಣ ಕಾರ್ಯಕ್ರಮವು 2026ರ ಸೆಪ್ಟೆಂಬರ್ 12ರ ಶನಿವಾರದಂದು ಸಂಜೆ 5:00 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಲಿದೆ.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್ ಅವರು ನುಡಿ ನಮನ ಸಲ್ಲಿಸಲಿದ್ದು, ನ್ಯಾಯವಾದಿ ಹಾಗೂ ದಿವಂಗತ ಎನ್. ಸುಬ್ರಮಣ್ಯಂ ಅವರ ಕಿರಿಯ ಸಹವರ್ತಿಯಾದ ಶ್ರೀ ಗಿರೀಶ್ ಮಳಿ ಅವರು ವೃತ್ತಿ ಜೀವನದ ಒಡನಾಟದ ಕುರಿತು ಸ್ಮರಣಾ ನುಡಿಗಳನ್ನಾಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ. ಐತಪ್ಪ ನಾಯ್ಕ್ ಅವರು ಹಾಗೂ ಸುಬ್ರಮಣ್ಯಂ ಕೊಳತ್ತಾಯ ಕುಟುಂಬಸ್ಥರು ಗೌರವ ಉಪಸ್ಥಿತಿಯಲ್ಲಿ ಇರಲಿದ್ದಾರೆ.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ವರದರಾಜ ಚಂದ್ರಗಿರಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಶಂಕರಿ ಶರ್ಮ ಅವರು ವಂದನಾರ್ಪಣೆಗೈಯಲ್ಲಿದ್ದಾರೆ.
ದಿವಂಗತ ಎನ್. ಸುಬ್ರಮಣ್ಯಂ ಕೊಳತ್ತಾಯ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು, ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿ ನಮನ ಸಲ್ಲಿಸಲು ಅವಕಾಶವಿರುತ್ತದೆ.
ಸಮಸ್ತ ಸಾಹಿತ್ಯ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.











