ಸುಂಟರಗಾಳಿ ಸಿನೆಮಾ ಖ್ಯಾತಿಯ ಲಲಿತಮ್ಮ ಇನ್ನಿಲ್ಲ! ಸಾರಾಯಿ ಶಾರದೆ ಪಾತ್ರದಲ್ಲಿ ಮಿಂಚಿದ್ದ ಪೋಷಕ ನಟಿ!!

ಸುಂಟರಗಾಳಿ’ ಸಿನಿಮಾದ ಸಾರಾಯಿ ಶಾರದೆ’ ಖ್ಯಾತಿಯ ಪೋಷಕನಟಿ ಲಲಿತಮ್ಮ ನಿಧನರಾಗಿದ್ದಾರೆ.
ಲಲಿತಮ್ಮನವರಿಗೆ 65 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಸ್ಟ್ರೋಕ್ ಆಗಿತ್ತು. ಕಳೆದ ಕೆಲ ದಿನಗಳಿಂದ `ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಅವರ ಆರೈಕೆ ಮಾಡಲಾಗುತ್ತಿತ್ತು.

Advertisement

ಜಂಗ್ಲಿ, ಲೈಫ್ ಇಷ್ಟೇನೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲಲಿತಮ್ಮ ಅಭಿನಯಿಸಿದ್ದರು. ಇಂದು ಬೆಳಿಗ್ಗೆ 9:30ರ ಸುಮಾರಿಗೆ ಲಲಿತಮ್ಮ ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಬಳಿಕ ಕಿರುತೆರೆ ಹಾಗೂ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page