ನೆಲ್ಯಾಡಿ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಕರ್ಬಸಂಕದ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುತ್ತೂರಿನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ನೆಲ್ಯಾಡಿಯಲ್ಲಿ ಪ್ಲವರ್ಸ್ ಹೊಟೆಲ್ ನಡೆಸುತ್ತಿರುವ ಜೋಜೋ ಟಿ. ಜೋರ್ಜ್ ಅವರ ಪುತ್ರ ಅಶ್ವಿನ್ ಜೋಜೋ ಜಾರ್ಜ್ (16) ಎಂದು ಗುರುತಿಸಲಾಗಿದೆ.ಗುರುವಾರ ಮುಂಜಾನೆ ನೆಲ್ಯಾಡಿ ಕರ್ಬಸಂಕದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಅಶ್ವಿನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.














