ಅಮೆರಿಕಾ: ಹಲವು ಯುದ್ಧ ನಿಲ್ಲಿಸಿದರೂ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಈಗ ಪುಲಿಟ್ಜರ್ ಪ್ರಶಸ್ತಿ ಮೇಲೂ ಆಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಟ್ರಂಪ್, ರಷ್ಯಾ ತನಿಖೆ ಕುರಿತ ವರದಿಗಳಿಗೆ ಪುಲಿಟ್ಜರ್ ಪಡೆದ ಪತ್ರಕರ್ತ ಬರಹಗಳು ಅಸ್ಪಷ್ಟ ತಪ್ಪುಗಳಿಂದ ಕೂಡಿದ್ದವು. ʼನನಗೆ ಬರವಣಿಗೆಗೂ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತುʼ ಎಂದರು.
ಟ್ರಂಪ್ ಸುಮಾರು 20 ಪುಸ್ತಕಗಳನ್ನು ಪ್ರಕಟಿಸಿದ್ದು, 1987ರಲ್ಲಿ ಬಿಡುಗಡೆಯಾದ ʼದಿ ಆರ್ಟ್ ಆಫ್ ದ ಡೀಲ್ʼ ಅವರ ಮೊದಲ ಕೃತಿ. ಇದನ್ನು ಟೋನಿ ಶ್ವಾರ್ಟ್ಜ್ ಎಂಬ ಘೋಸ್ಟ್ ಬರಹಗಾರ ಬರೆದಿದ್ದರು ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.














