ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲೊಂದಾದ ‘ವಜ್ರಮುಷ್ಟಿ ಕಾಳಗ’ಕ್ಕೆ ಈ ಬಾರಿಯ ದಸರಾದಲ್ಲಿ ಬ್ರೇಕ್ ಬಿದ್ದಿದೆ.
ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೋಚಕ ಹಾಗೂ ರಕ್ತತರ್ಪಣದ ಕಾಳಗವನ್ನು ರದ್ದುಗೊಳಿಸಲಾಗಿದ್ದು, ರಾಜಮನೆತನದ ಆಚರಣೆಗಳಲ್ಲಿ ಪ್ರಮುಖ ಅಂಗವಾಗಿದ್ದ ಈ ಕ್ರೀಡೆ ನಡೆಯದಿರುವುದು ಕ್ರೀಡಾಭಿಮಾನಿಗಳು ಹಾಗೂ ಇತಿಹಾಸ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.














