ಝೀ ಕನ್ನಡದ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-ಸೂಪರ್‌ ಮಾಮ್‌ʼನಲ್ಲಿ ತುಳುನಾಡ ಪ್ರತಿಭೆ

ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌-ಸೂಪರ್‌ ಮಾಮ್‌ʼ (Dance Karnataka Dance-Super Mom) ರಿಯಾಲಿಟಿ ಶೋಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ನೃತ್ಯ ಕಲಾವಿದೆ ಸೌಪರ್ಣಿಕ ಗುರುರಾಜ್‌ ರೈ ಆಯ್ಕೆಯಾಗಿದ್ದಾರೆ.

ಒಟ್ಟು ಆಯ್ಕೆಯಾದ ಹದಿಮೂರು ಸ್ಪರ್ಧಿಗಳಲ್ಲಿ ದಕ್ಷಿಣ ಕರ್ನಾಟಕದಿಂದ ಅಂತಿಮವಾಗಿ ಶೋಗೆ ಆಯ್ಕೆಯಾಗಿದ್ದು ಇಬ್ಬರು ಸ್ಪರ್ಧಿಗಳು ಮಾತ್ರ. ಅದರಲ್ಲೂ ಪುತ್ತೂರಿನಿಂದ ಸೌಪರ್ಣಿಕ ಗುರುರಾಜ್‌ ಆಯ್ಕೆಯಾಗಿದ್ದು ಇಲ್ಲಿನ ವೀಕ್ಷಕರಲ್ಲಿ ಸಂಭ್ರಮ ತಂದಿದೆ.

Advertisement

ಇವರು ತನ್ನ ಕಾಲೇಜು ದಿನಗಳಿಂದಲೇ ನೃತ್ಯಪಟುವಾಗಿದ್ದು, ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ಮಂಗಳೂರಿನ ನಮ್ಮ ಕುಡ್ಲ ಚಾನೆಲ್‌ ವತಿಯಿಂದ ನಡೆಸಲಾದ ʼಡ್ಯಾನ್ಸ್ ಮಮ್ಮಿ ಡ್ಯಾನ್ಸ್‌ʼ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಜನಮನ್ನಣೆ ಗಳಿಸಿದ್ದರು.

ಇವರ ಪತಿ ಗುರುರಾಜ್‌ ರೈ ಇವರ ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ದಂಪತಿಗಳಿಗೆ ಚರಿಶ್‌ ಎಂಬ ಮುದ್ದಾದ ಮಗನಿದ್ದಾನೆ. ಕುಟುಂಬದ ಪ್ರೋತ್ಸಾಹದ ಜೊತೆಗೆ ಜಿಲ್ಲೆಯ ಜನತೆಯ ಹಾರೈಕೆಯಿಂದ ಇವರು ಝೀ ಕನ್ನಡದ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಲಿ ಎಂಬುದೇ ನಮ್ಮೆಲ್ಲರ ಆಶಯ.

Share this article

You cannot copy content of this page