ಮೋಕ್ಷದೆಡೆಗೆ ಒಂದು ಪಯಣ – ಸುಕನ್ಯಾ ಕಳಸ

ಮೋಕ್ಷದೆಡೆಗೆ ಒಂದು ಪಯಣ

ಯಶೋಧರೆ,ರಾಹುಲರ ಬಿಟ್ಟು ಹೊರಡುವ ಅಂತಿಮ ಉದ್ವಿಗ್ನ ಕ್ಷಣ
ತನ್ನ ಪರಿಧಿಯ ಬಿಟ್ಟು ಅನಂತದೆಡೆಗೆ ಹಾರುವ ದಿಕ್ಕೆಟ್ಟ ಗಳಿಗೆ..
ಎದೆಯೊಳಗೆ ಸಟಕ್ಕನೆ
ಮುರಿದ ಮುಳ್ಳು
ಛಿಲ್ಲನೆ ಚಿಮ್ಮಿದ ಸ್ವಂತದ ರಕ್ತ !
ಅಮೃತಕ್ಕೆ ಹಾರುವ ಗರುಡನ
ಹಪಾಹಪಿಯ ನಡುವಿನ ಅನಾಥ ಪ್ರೇತ
-ದ ಗರ್ಭಪಾತ !
ಕಡೆಗೂ ಮೋಕ್ಷದಡೆಗೆ ಹೊರಟಿದ್ದು
ಸಿದ್ಧಾರ್ಥನಲ್ಲ ಅವನ ಶವ !

Advertisement

Share this article

You cannot copy content of this page