ಕುಂಬ್ರದ ಕುಯ್ಯಾರಿನಲ್ಲಿ ಕಳ್ಳರ ಹಾವಳಿ!! ಕಿಟಕಿ ಮುರಿದು ಚಿನ್ನಾಭರಣ ಹಾಗೂ ನಗದು ಕಳವು!!

ಪುತ್ತೂರು : ಮನೆಯ ಹಿಂಬಾಗದ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಹಣ ದೋಚಿದ ಘಟನೆ ನ.1 ರಂದು ರಾತ್ರಿ ಕುಂಬ್ರ ಸಮೀಪದ ಕುಯ್ಯಾರು ಎಂಬಲ್ಲಿ ನಡೆದಿದೆ.

Advertisement

ಕುಂಬ್ರದಲ್ಲಿ ಸಿ.ಎಂ ಚಿಕನ್ ಸೆಂಟರ್ ಹೊಂದಿರುವ ಕುಯ್ಯಾರು ನಿವಾಸಿ ಬಶೀರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ಬಶೀರ್ ಅವರು ನ.1ರಂದು ರಾತ್ರಿ 9.15 ರ ವೇಳೆಗೆ ಪತ್ನಿ ಹಾಗೂ ಮಕ್ಕಳೊಂದಿಗೆ ಸಾರಪುಣಿಯಲ್ಲಿ ನಡೆದ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ 10.45 ರ ವೇಳೆಗೆ ಅವರು ಮನೆಗೆ ವಾಪಸ್ ಬಂದು ಮನೆಯೊಳಗೆ ಹೋದಾಗ ಮನೆಯ ಹಿಂದಿನ ಬಾಗಿಲು ತೆರೆದಿರುವುದು ಕಂಡು ಬಂದಿದ್ದು ಅಲ್ಲೇ ಇದ್ದ ಕಿಟಕಿಯ ಸರಳುಗಳನ್ನು ಮುರಿದಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಮನೆಯ ಕೋಣೆಯನ್ನು ಪರಿಶೀಲಿಸಿದಾಗ ಕೋಣೆಯಲ್ಲಿರುವ ಕಪಾಟು ತೆರೆದಿದ್ದು ಅದರೊಳಗಿದ್ದ ಬಟ್ಟೆ ಬರೆಗಳು ಚೆಲ್ಲಾಲ್ಲಿಯಾಗಿ ನೆಲದ ಮೇಲೆ ಬಿದ್ದಿತ್ತು. ಮಾತ್ರವಲ್ಲದೇ ಅದೇ ಕಪಾಟಿನಲ್ಲಿದ್ದ 5 ಪವನ್ ಚಿನ್ನಾಭರಣ, 0.650 ಗ್ರಾಂನ ಡೈಮಂಡ್ ರಿಂಗ್ ಹಾಗೂ 25 ಸಾವಿರ ರೂ ನಗದು ಕಳ್ಳತನಗೊಂಡಿದೆ ಎಂದು ವರದಿಗಳು ತಿಳಿಸಿವೆ.

Advertisement
Advertisement

ಕಳ್ಳರು ಮನೆಯ ಇನ್ನೊಂದು ಕೋನೆಗೆ ಹೋಗಿ ಕಪಾಟನ್ನು ಜಾಲಾಡಿದ್ದರೂ ಅದರಲ್ಲಿ ಯಾವುದೇ ವಸ್ತುಗಳು ಕಳ್ಳತನಗೊಂಡಿಲ್ಲ. ಘಟನೆ ಬಗ್ಗೆ ಬಶೀರ್‌ ಅವರು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page