ಪುತ್ತೂರು : ಇಲ್ಲಿನ ತೆಂಕಿಲದ ವಿವೇಕಾನಂದ ಶಾಲೆಯ ಕನ್ನಡ ಮಾಧ್ಯಮದ ಅಧ್ಯಕ್ಷರಾಗಿ ಮುರಳೀಕೃಷ್ಣ ಹಂಸತಡ್ಕ ಆಯ್ಕೆಯಾಗಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಮೋಹನ್ದಾಸ್ ಬಲ್ಪಾಡಿ ಹಾಗೂ ಕನ್ನಡ ಮಾಧ್ಯಮದ ಸಂಚಾಲಕರಾಗಿ ಸಂಪತ್ ಕುಮಾರ್ ಅವರು ಆಯ್ಕೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತೆಂಕಿಲದಲ್ಲಿರುವ ವಿವೇಕಾನಂದ ವಿದ್ಯಾಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು, ಇದೀಗ ನೂತನ ಸಮಿತಿ ರಚಿಸಲಾಗಿದ್ದು, ಶಾಲಾ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿದ್ಯಾರ್ಥಿಗಳ ಪೋಷಕರು ಅಭಿಪ್ರಾಯಪಟ್ಟಿದ್ದಾರೆ.













