ಮುಂದಿನ 10 ವರ್ಷಗಳ‌‌ ಕಾಲ ವಿಜಯೇಂದ್ರ ಅವರು ಸಿಎಂ ಅಭ್ಯರ್ಥಿ ಅಲ್ಲ!! ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯಬೇಕು!! ಮತ್ತೆ ಬಜೆಪಿ ಸೇರಲು ಯತ್ನಾಳ್‌ ಷರತ್ತು!

ವಿಜಯಪುರ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಲ್‌ ಅವರು ಮತ್ತೆ ಬಿಜೆಪಿಗೆ ಸೇರಲು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಗುರಿಯಾಗಿಸಿಕೊಂಡು ಪಕ್ಷದ ಮುಂದೆ ಎರಡು ಷರತ್ತುಗಳನ್ನು ಹಾಕಿದ್ದಾರೆಂದು ಮೂಲಗಳು ಹೇಳಿವೆ.

Advertisement

ಪಕ್ಷದ ಶಿಸ್ತು ಉಲ್ಲಂಘನೆಗೊಳಗಾಗಿ ಉಚ್ಚಾಟನೆಗೊಂಡಿದ್ದ ಯತ್ನಾಳ್ ಮತ್ತೆ ಬಿಜೆಪಿ ಸೇರಲು ಎರಡು ಷರತ್ತುಗಳನ್ನು‌ ಹಾಕಿದ್ದಾರೆ. ಮೊದಲನೆಯದ್ದು, “ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯಬೇಕು”, ಇನ್ನೊಂದು, ಮುಂದಿನ 10 ವರ್ಷಗಳ ಕಾಲ ಮುಖ್ಯಮಂತ್ರಿ ಆಗಲ್ಲ ಎಂದು ಬಾಂಡ್ ಬರೆದುಕೊಡಬೇಕು”.
ಈ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್‌, ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದಾರೆ, ಹೀಗಾಗಿ ಮುಂದಿನ 10 ವರ್ಷಗಳ‌‌ ಕಾಲ ವಿಜಯೇಂದ್ರ ಅವರು ಸಿಎಂ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟಪಡಿಸುವಂತೆ ಷರತ್ತು ಹಾಕಿದ್ದಾಗಿ ತಿಳಿಸಿದರು.

Advertisement
Advertisement

ಯತ್ನಾಳ್ ಅವರ ಹೇಳಿಕೆಗಳ ಮೂಲ ತಿರುಳು ಏನೆಂದರೆ, “ಬಿಜೆಪಿ ಉಳಿಬೇಕು, ಆದರೆ ಅದು ಕಳಂಕಿತರ ಕೈಯಲ್ಲಿ ಉಳಿಯಬಾರದು” ಎನ್ನುವುದಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಉಳಿಸಿಕೊಳ್ಳಲು ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page