ಜಾಹಿರಾತು ಶೂಟಿಂಗ್‌ ವೇಳೆ ಕ್ರಿಕೆಟರ್‌ಗೆ ಗಾಯ! ರಚಿನ್‌ ರವೀಂದ್ರ ಆಟ ಬಿಟ್ಟು ಶೂಟಿಂಗ್‌ ಹೋಗಲು ಕಾರಣವೇನು?

ನ್ಯೂಜಿಲ್ಯಾಂಡ್: ಸಾಮಾನ್ಯವಾಗಿ ಆಟಗಾರರು ಪಂದ್ಯದ ವೇಳೆ ಅಥವಾ ತರಬೇತಿ ವೇಳೆ ಗಾಯಗೊಳ್ಳುತ್ತಾರೆ. ಆದರೆ ನ್ಯೂಜಿಲ್ಯಾಂಡ್‌ನ ಆಟಗಾರನೋರ್ವ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದು, ಮುಂದಿನ ಭಾರತ ವಿರುದ್ಧದ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಆಕ್ಲಂಡ್ ನಲ್ಲಿ ನಡೆದ ಜಾಹೀರಾತು ಚಿತ್ರೀಕರಣದ ವೇಳೆ ಆಲ್ ರೌಂಡರ್ ರಚಿನ್ ರವೀಂದ್ರ ಅವರ ಬಲ ಭುಜದ ಮೂಳೆ ಮುರಿದಿದೆ. ಹೀಗಾಗಿ ಭಾರತ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ರಚಿನ್ ರವೀಂದ್ರ ಅವರ ಲಭ್ಯತೆ ಅನುಮಾನಕ್ಕೆ ಕಾರಣವಾಗಿದೆ.
ಬುಧವಾರ ಚಿತ್ರೀಕರಣದ ಸಮಯದಲ್ಲಿ ಡೈವಿಂಗ್ ಕ್ಯಾಚ್ ಪ್ರಯತ್ನಿಸುವಾಗ ರವೀಂದ್ರ ಗಾಯಗೊಂಡರು ಎಂದು ವರದಿಯಾಗಿದೆ. ಕ್ಯಾಚ್ ಪೂರ್ಣಗೊಳಿಸುವಾಗ ರಚಿನ್ ಸುರಕ್ಷತಾ ಮ್ಯಾಟ್‌ನ ಬಿದ್ದರು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಿಳಿಸಿದೆ.

Advertisement


“ಇದು ನಿಜಕ್ಕೂ ದುರದೃಷ್ಟಕರವಾದ ಗಾಯದ ಸಮಸ್ಯೆಯಾಗಿದೆ. ರಚಿನ್ ಗಾಯದ ಬಗ್ಗೆ ನಮಗೆ ತೀವ್ರ ಬೇಸರವಿದೆ; ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಆದಷ್ಟು ಬೇಗ ಮೈದಾನಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಆಟಗಾರರು ಭಾಗವಹಿಸುವ ಎಲ್ಲಾ ವಾಣಿಜ್ಯ ಚಿತ್ರೀಕರಣಗಳಂತೆಯೇ, ಈ ಚಟುವಟಿಕೆಗಳನ್ನೂ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಮಾಡಲಾಗಿತ್ತು. ಇದೊಂದು ಅನಿರೀಕ್ಷಿತ ಹಾಗೂ ವಿಚಿತ್ರವಾದ ಅಪಘಾತವಾಗಿದ್ದು, ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನಮ್ಮ ಕಾರ್ಯವಿಧಾನಗಳನ್ನು ನಾವು ನಿರಂತರವಾಗಿ ಪರಿಶೀಲಿಸುತ್ತಲೇ ಇರುತ್ತೇವೆ,” ಎಂದು ನ್ಯೂಜಿಲ್ಯಾಂಡ್‌ನ ಪರ್ಫಾರ್ಮೆನ್ಸ್ ಮ್ಯಾನೇಜರ್ ಮೈಕ್ ಸ್ಯಾಂಡಲ್ ತಿಳಿಸಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page