ಧರ್ಮಸ್ಥಳ : ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಮುಖ್ಯಸ್ಥನಾಗಿರುವ ಐಪಿಜಿ ಎನ್. ಶಶಿಕುಮಾರ್ ಅವರನ್ನು ಇಂದು ಜವಾಬ್ದಾರಿಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಎಸ್‌ಐಟಿ ಜವಾಬ್ದಾರಿಯಿಂದ ತಮ್ಮನ್ನು ಹೊರಗಿಡುವಂತೆ ಶಶಿಕುಮಾರ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ಸಂವಂಧ ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ತಮ್ಮ ಮನವಿಯನ್ನು ಶೀಘ್ರವಾಗಿ ಪುರಸ್ಕರಿಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಶಶಿಕುಮಾರ್ ಅವರ ಬಿಡುಗಡೆ ಬಳಿಕ ಎಸ್‌ಐಟಿಯ ನೂತನ ಮುಖ್ಯಸ್ಥರಾಗಿ ಲಾಬುರಾಮ್ ಅಥವಾ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿರುವುದು ದೃಢಪಟ್ಟಿಲ್ಲ. ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರೂ ಬದಲಾವಣೆ ಸಾಧ್ಯತೆ. ಎಸ್‌ಐಟಿಯಲ್ಲಿನ ಇತರ ಅಧಿಕಾರಿಗಳ ಬದಲಾವಣೆಯ ಸಾಧ್ಯತೆಯೂ ಚರ್ಚೆಯಲ್ಲಿದೆ. ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರ ಸ್ಥಾನಕ್ಕೆ ಎಸಿಪಿ ಶ್ರೀನಿಧಿ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.













