ಕಡಬದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ! ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಪ್ರಕಟ!

ಕಡಬ ಠಾಣಾ ವ್ಯಾಪ್ತಿಯ ನಿವಾಸಿಯಾದ ಅಪ್ರಾಪ್ತೆ ಬಾಲಕಿಯನ್ನು ಕೊಂಡೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ರವಿ @ರವೀಂದ್ರ ಆಚಾರ್ಯ (32) ಎಂಬಾತನ ವಿರುದ್ದ ಕಡಬ ಪೊಲೀಸ್ ಠಾಣಾ ಅ. ಕ್ರ :208/18, ಕಲಂ : 376(2)(i), 505 IPC ಮತ್ತು ಕಲಂ : 5(l), 6 POCSO Act -12 ರಂತೆ‌ ಪ್ರಕರಣ ದಾಖಲಾಗಿದೆ.

Advertisement

ಪ್ರಕರಣದ ತನಿಖೆ ನಡೆಸಿದ ಅಂದಿನ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಡಿ. ಮಂಜುನಾಥ್ ರವರು ಆರೋಪಿ ಪುತ್ತೂರು ನೆಲ್ಯಾಡಿ ನಿವಾಸಿ ರವಿ @ರವೀಂದ್ರ ಆಚಾರ್ಯ (32) ಎಂಬಾತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ. ಮಾನ್ಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಮಂಗಳೂರು (ಕಾರ್ಯ ನಿರ್ವಹಣೆ -ಪುತ್ತೂರು ) ಇಲ್ಲಿ ಪ್ರಕರಣದ‌ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಸುಮಂಗಲ ರವರು, ಆರೋಪಿತನ ವಿರುದ್ಧದ ಆರೋಪಿಗಳು ಸಾಬೀತಾದ ಹಿನ್ನೆಲೆಯಲ್ಲಿ, 2012 ರ POCSO ಕಾಯ್ದೆಯ ಸೆಕ್ಷನ್ 6 ರೊಂದಿಗೆ ಓದಲಾದ ಸೆಕ್ಷನ್ 5(1) ರ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧಕ್ಕಾಗಿ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 25,000/- ದಂಡ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಪ್ರಕಟವಾಗಿದೆ.

Advertisement
Advertisement

ಐ.ಪಿ.ಸಿ.ಯ ಸೆಕ್ಷನ್ 506 ರ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧಕ್ಕಾಗಿ ಒಂದು ವರ್ಷದ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 25,000/- ದಂಡ. ದಂಡವನ್ನು ಪಾವತಿಸಲು ವಿಫಲವಾದರೆ, ಒಂದು ವರ್ಷದ ಕಠಿಣ ಜೈಲು ಶಿಕ್ಷೆ. (ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುವಂತೆ) ಅದೇಶಿಸಿರುತ್ತಾರೆ. ಸರ್ಕಾರಿ ಅಭಿಯೋಜಕರಾದ ಪುಷ್ಪರಾಜ್ ಅಡoತ್ಯಾಯ ರವರು ಸಮರ್ಥ ವಾದಮಂಡನೆ ನಡೆಸಿರುತ್ತಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page