ಮೂಡಬಿದಿರೆ ಸಮೀಪ ಕೊಡ್ಯಡ್ಕ ಬಳಿಯ ಕೇಮಾರು ಮಠಕ್ಕೆ ಕರಾವಳಿ ಕ್ಯಾಬಿನೆಟ್‌ನಲ್ಲಿ 1 ಕೋಟಿ ರೂಪಾಯಿ ಅನುದಾನ ಘೋಷಣೆಯಾಗಿದೆ. ಕರಾವಳಿ ಕ್ಯಾಬಿನೆಟ್‌ನಲ್ಲಿ ಮಠಗಳಿಗೆ ಅನುದಾನಗಳು ದೊರಕಿರುವುದು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ.
ಶ್ರೀ ಸಾಂದೀಪನಿ ಸಾಧನಾಶ್ರಮ ಸಂಸ್ಥೆಯ ಕೇಮಾರು ಮಠದ ಪೀಠಾಧಿಪತಿ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಅನೇಕ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡವರು. ಸರ್ವಧರ್ಮದ ಸ್ವಾಮೀಜಿ ಎಂದೇ ಹೆಸರು ಪಡೆದಿರುವ ಇವರು ಎಲ್ಲಾ ಧರ್ಮದ ಕಾರ್ಯಕ್ರಮಗಳಿಗೆ ಭಾಗವಹಿಸಿ ಅದರ ಆಚರಣೆಗಳ ಮಹತ್ವದ ಕುರಿತು ತಮ್ಮ ಮಾತಿನ ಮುಖೇನ ಜನರಿಗೆ ತಿಳಿಸುತ್ತಾ ಬಂದಿದ್ದಾರೆ.
ಧರ್ಮ, ಆಧ್ಯಾತ್ಮಿಕತೆ ಜತೆಗೆ ಸಮಾಜಮುಖಿ ಕಾರ್ಯಗಳು, ಪರಿಸರ ಸಂರಕ್ಷಣೆ ಮತ್ತು ಶಿಕ್ಷಣಕ್ಕೆ ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಕೇಮಾರು ಶ್ರೀಗಳೆಂದರೆ ಕರಾವಳಿ ಭಾಗದ ಎಲ್ಲಾ ಧರ್ಮದವರಿಗೂ ವಿಶೇಷ ಪ್ರೀತಿ.
ಇದೀಗ ಕೇಮಾರು ಮಠಕ್ಕೆ ಒಂದು ಕೋಟಿ ರುಪಾಯಿ ಸರ್ಕಾರದ ವತಿಯಿಂದ ಅನುಮೋದನೆಗೊಂಡಿರುವುದು ಅಲ್ಲಿನ ಭಕ್ತರಲ್ಲಿ ಸಂತಸ ತಂದಿದೆ. ಜೊತೆಗೆ, ಶ್ರೀಗಳಿಂದ ಇನ್ನಷ್ಟು ಸಮಾಜಮುಖಿ ಮತ್ತು ಧಾರ್ಮಿಕ ಕೆಲಸಗಳು ಕೇಮಾರು ಮಠದ ಮುಖಾಂತರ ನಡೆಯಲಿ ಎಂಬುದೇ ಕರಾವಳಿ ಭಾಗದ ಜನರ ಆಶಯ.










