ಕುಕ್ಕೆಯ ಸಮಸ್ತ ಭಕ್ತರ ಹಾಗೂ ಪ್ರಸನ್ನ ದರ್ಬೆಯ ಹೋರಾಟಕ್ಕೆ ಸಂದ ಜಯ! ಪೂರ್ವ ಶಿಷ್ಟಾಚಾರ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮುಂದುವರಿಕೆ!!

ಕುಕ್ಕೆ ಸುಬ್ರಹ್ಮಣ್ಯ, ಅ.27: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳ ಹಿಂದೆ ಆಡಳಿತ ಮಂಡಳಿಯು ಹಳೆಯ ಪರಂಪರೆಯಾದ ವೈಯಕ್ತಿಕ ಸಂಕಲ್ಪ ಸೇವೆಯನ್ನು ಸ್ಥಗಿತಗೊಳಿಸಿ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

Advertisement

ತಮ್ಮ ಹರಿಕೆಗಳನ್ನು ಸಂದಾಯ ಮಾಡುವುದು ಹೇಗೆ ಎಂಬ ಗೊಂದಲದೊಂದಿಗೆ ಅನೇಕ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.ಭಕ್ತರ ಧ್ವನಿಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಸದಸ್ಯ ಪ್ರಸನ್ನ ದರ್ಬೆ ಅವರು ಸಂಕಲ್ಪ ಮತ್ತು ಆ ಪೂಜೆಗಳ ಪವಿತ್ರತೆ ಮತ್ತು ಅನಿವಾರ್ಯತೆಯ ಬಗ್ಗೆ ತಿಳಿಸಿ, ದೇವಾಲಯದ ದಿಟ್ಟಂ (ಹಿಂದಿನ ಕಾಲದಿಂದ ನಡೆದು ಬಂದಿರುವ ಕ್ಷೇತ್ರದ ಪೂಜಾ ಪದ್ಧತಿ) ಅನ್ನು ಧಿಕ್ಕರಿಸಿ ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುತ್ತಿರುವುದನ್ನು ಮನಗಂಡು ವಿರೋಧಿಸಿದ್ದರು.ಈ ಆದೇಶವನ್ನು ಹಿಂಪಡೆಯದಿದ್ದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದರು. ನಾಳೆ ಹಿಂದೂ ಸಂಘಟನೆಗಳೊಂದಿಗೆ ಸಭೆ ಸೇರಿ ಪ್ರತಿಭಟನೆಯ ಬಗ್ಗೆ ಚರ್ಚಿಸುವ ಕುರಿತು ಕೂಡ ಮಾತುಕತೆಗಳಾಗಿತ್ತು. ಮಾಧ್ಯಮಗಳು ಕೂಡ ಭಕ್ತರ ಆಕ್ರೋಶವನ್ನು ಸರಕಾರಕ್ಕೆ ಮುಟ್ಟಿಸುವ ಕಾರ್ಯವೆಸಗಿದವು.

Advertisement
Advertisement

ಭಕ್ತರ ನಿರಂತರ ಆಗ್ರಹ ಮತ್ತು ವಿರೋಧದ ಹಿನ್ನೆಲೆಯಲ್ಲಿ ನೇರವಾಗಿ ಮುಖ್ಯಮಂತ್ರಿ ಕಛೇರಿಯಿಂದಲೇ ಇದರ ವಿವರವನ್ನು ಪಡೆದು ದೇವಾಲಯದ ಹಿಂದಿನ ಪದ್ಧತಿಯಂತೆ ಮುಂದುವರಿಸಲು ಆಡಳಿತ ಮಂಡಳಿಗೆ ನಿರ್ದೇಶಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಆದುದರಿಂದ ಆಡಳಿತ ಮಂಡಳಿಯು ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ರದ್ದುಗೊಳಿಸಿ, ನಾಳೆಯಿಂದ (ಅ.28) ಮೊದಲಿನಂತೆಯೇ ಪ್ರತ್ಯೇಕ ಸಂಕಲ್ಪ ಸೇವೆ ನಡೆಸಲು ತೀರ್ಮಾನಿಸಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page