ಇನ್ನೂ ಪತ್ತೆಯಾಗಿಲ್ಲ ಸ್ಟಿಂಗ್‌ ಆಪರೇಷನ್‌ ಮದರ್‌ ಡಿವೈಸ್!‌ ಪೊಲೀಸರ ಪ್ರಶಾಂತತೆಗೇ ಪ್ರಶಾಂತ್‌ ಸವಾಲು!!!

ಬೆಂಗಳೂರು : ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆ ಸಿಸಿಬಿ ಪೊಲೀಸರಿಂದ ತೀವ್ರಗೊಂಡಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ಎರಡು ಮದರ್ ಡಿವೈಸ್‌ಗಳು ಇದುವರೆಗೂ ಪತ್ತೆಯಾಗಿಲ್ಲ. ಸ್ಟಿಂಗ್ ರೆಕಾರ್ಡಿಂಗ್‌ಗೆ ಬಳಸಿದ ಮೊಬೈಲ್ ಮತ್ತು ಕ್ಯಾಮೆರಾ ಹಾಗೂ ಅದನ್ನು ಅಪ್‌ಲೋಡ್ ಮಾಡಲು ಬಳಸಿದ ಫೋನ್ ಈ ಎರಡು ಡಿವೈಸ್‌ಗಳಲ್ಲಿ ಸೇರಿವೆ. ಈ ಪ್ರಕರಣದಲ್ಲಿ ಪ್ರಶಾಂತ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ನಾಲ್ಕು ಬಾರಿ ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಆತ ಪ್ರತಿ ಬಾರಿಯೂ ತನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ, ನಾನು ಸ್ಟಿಂಗ್ ಮಾಡಿಲ್ಲ ಎಂದು ನಿರಾಕರಿಸುತ್ತಿದ್ದಾನೆ. ಆತನ ಹೇಳಿಕೆಗಳಿಂದಾಗಿ ತನಿಖೆಗೆ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ.

Advertisement

ಪ್ರಕರಣದಲ್ಲಿ ಆರೋಪ ವ್ಯಕ್ತವಾಗಿರುವ ಪತ್ರಕರ್ತರನ್ನೂ ಆರು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವಾಗ ಈ ಡಿವೈಸ್‌ಗಳು ಸಿಗದಿದ್ದರೆ, ಪ್ರಕರಣಕ್ಕೆ ದೊಡ್ಡ ತೊಡಕಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿವೈಸ್‌ಗಳ IMEI ಸಂಖ್ಯೆಗಳಂತಹ ತಾಂತ್ರಿಕ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದರೂ, ಭೌತಿಕ ಡಿವೈಸ್‌ಗಳ ಪತ್ತೆ ಅನಿವಾರ್ಯವಾಗಿದೆ. ತನಿಖೆ ಮುಂದುವರಿದಿದ್ದು, ಡಿವೈಸ್‌ಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement
Advertisement

ಸ್ಟಿಂಗ್‌ ಕಾರ್ಯಾಚರಣೆಗಾಗಿ ಸೆಕೆಂಡ್‌ ಹ್ಯಾಂಡ್‌ ಮೋಬೈಲ್‌ ಖರೀದಿ ಮಾಡಿ ಆರೋಪಿಗಳಿಗೆ ನೀಡಿದ್ದ ದೆಹಲಿ ಮೂಲದ ರಿತೇಶ್‌ ಪಾಂಡೆ ಎಂಬಾತನನ್ನು ಆರಂಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ನಂತರ ಆತನಿಗೆ ಜಾಮೀನು ದೊರಕಿತ್ತು. ಸದ್ಯ ಆತನಿಂದ ಮತ್ತು ಇತರರ ವಿಚಾರಣೆಯಿಂದ ತಿಳಿದುಬಂದ ವಿಚಾರಗಳ ಅನ್ವಯ ತನಿಖೆ ನಡೆಯುತ್ತಿದೆ. ಆದರೆ, ಮೊಬೈಲ್‌ ಹಾಗೂ ಮದರ್‌ ಡಿವೈಸ್‌ಗಳು ದೊರೆಯದೇ ಇರುವುದು ತನಿಖೆಗೆ ಹಿನ್ನಡೆಯಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page