ಕಾಸರಗೋಡು : ಇಲ್ಲಿನ ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಪೈವಳಿಕೆ ಶಾಖೆಯ ಆಶ್ರಯದಲ್ಲಿ ಗಣಪತಿ ಹವನ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಘದ 22ನೇ ವಾರ್ಷಿಕ ಮಹಾಸಭೆಯು ಒಕ್ಟೋಬರ್ 04 ಭಾನುವಾರ ಬೆಳಿಗ್ಗೆ 08 ಗಂಟೆಗೆ ಕಾಯರ್ಕಟ್ಟೆಯ ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಕ್ರೀಡಾಕೂಟ ಮತ್ತು ಅನ್ನಸಂತರ್ಪಣೆ ನಡೆಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










