“ಏಸುವೇ ನನ್ನನ್ನು ಮುಟ್ಟಿ ಸರಿಪಡಿಸಿದಕ್ಕಾಗಿ ನಿಮಗೆ ಸ್ತೋತ್ರ” || ಆರೋಗ್ಯದ ಹೆಸರಿನಲ್ಲಿ ನಡೆಯುತ್ತಿದೆಯೇ ಧರ್ಮದ ಪ್ರಚಾರ!! ಸುರೇಶ್‌ ಈದು ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತೇನು??!

ಏಸು ಕ್ರಿಸ್ತನ ಹೆಸರು ಹೇಳಿ ತಲೆ ಮುಟ್ಟಿದ ಕೂಡಲೇ ತಲೆ ನೋವು ಮಾಯವಾಗುತ್ತದಂತೆ, (ಜೊತೆಗೊಂದು ಮಂತ್ರವೂ ಇದೆ) 82 ವರ್ಷದ ವೃದ್ಧರ ತಲೆ ನೇವರಿಸಿದ ಕೂಡಲೇ ಗುಣಮುಖರಾಗುತ್ತಾರಂತೆ. ಇದು ವೈದ್ಯಲೋಕಕ್ಕೆ ಸವಾಲು ಎಂದು ಹುಬ್ಬೇರಿಸುವ ಸನ್ನಿವೇಶ ಅಲ್ವಾ??!

Advertisement

ಕೆಲವು ದಿನಗಳ ಹಿಂದೆ ವಿಡಿಯೋವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್‌ ಆಗಿತ್ತು. ಕೆಲವರ ಮಾತಿಗೆ ಮಣಿದು ಆಸ್ಪತ್ರೆಂದು ಭಾವಿಸಿ ದೈವ ನರ್ತಕ ಸುರೇಶ್‌ ಈದು ಅವರು ತಮ್ಮ ತಂದೆಯನ್ನು ಕರೆದುಕೊಂಡು ಸೂಚಿಸಿದ ಜಾಗಕ್ಕೆ ತೆರಳಿದ್ದರು. ಆದರೆ ಆ ಜಾಗ ಆಸ್ಪತ್ರೆಯಾಗಿರಲಿಲ್ಲ. ಅಲ್ಲಿ ಜನಸ್ತೋಮವೇ ನೆರೆದಿತ್ತು. ಅಲ್ಲಿ ಕೆಲವರು ಬೊಬ್ಬೆ ಹೊಡೆಯುತ್ತಿದ್ದರು, ಇನ್ನು ಕೆಲವರು ದೇವರೇ ಮೈಮೇಲೆ ಬಂದಂತೆ ಆಡುತ್ತಿದ್ದರು. ಸುರೇಶ್‌ ಅವರ ತಂದೆಯನ್ನು ಅಲ್ಲಿದ್ದ ಏಸುವಿನ ಪರಿಚಾರಕರು ಎಂದು ಕರೆಸಿಕೊಳ್ಳುವ ಕೆಲವರು ಸುರೇಶ್‌ ಅವರ ತಂದೆಯನ್ನು ಮುಟ್ಟಿ ಅದೇನೋ ಸ್ಪ್ರೇ ಸಿಂಪಡಿಸಿದರು. 3 ಬಾರಿ ಈ ಸ್ಪ್ರೇ ಸಿಂಪಡಿಸಿದರೂ ಯಾವುದೇ ಪ್ರಗತಿ ಕಾಣದಿದ್ದಾಗ ಸುರೇಶ್‌ ಪರವ ಅವರಲ್ಲಿ ನಿಮಗೇನಾದರೂ ಆರೋಗ್ಯ ಸಮಸ್ಯೆ ಇದೆಯೇ ಎಂದು ಕೇಳುತ್ತಾರೆ.
ಇದಕ್ಕೆ ಸುರೇಶ್‌ ಅವರು ತಾನು ಅನೇಕ ವರ್ಷಗಳಿಂದ ನೇಮ ಕಟ್ಟುತ್ತಿದ್ದು, ನಿದ್ದೆಯ ಕಕೊರತೆಯಿಂದ ತಲೆನೋವಿನ ಸಮಸ್ಯೆಯಿದೆಯೆಂದು ಹೇಳಿದ್ದಾರೆ. ನಂತರ ಏಸುವಿನ ಪರಿಚಾರಕರು ಎಂದು ಕರೆಯಲ್ಪಡುವ ಒಂದಷ್ಟು ಜನ ಅವರನ್ನು ಮುಟ್ಟಿ ಏಸುವಿನ ನಾಮಸ್ಮರಣೆ ಮಾಡುವಂತೆ ಹೇಲಿದರು. ಅವರ ಮಾತಿನಂತೆ ನಡೆದುಕೊಂಡರೂ ಇವರ ಸಮಸ್ಯೆಗೆ ಮಾತ್ರ ಮುಕ್ತಿ ದೊರಕಿಲ್ಲ.

Advertisement
Advertisement

ಈ ಬಗ್ಗೆ ಸ್ಪಷ್ಟನೆ ನೀಡಿದ ಸುರೇಶ್‌ ಈದು ಅವರು ಸಾರ್ವಜನಿಕರಲ್ಲಿ ಇಂತಹ ಮಾತಿಗೆ ಮರುಳಾಗದಂತೆ ವಿನಂತಿಸಿದ್ದಾರೆ. ಏಸುವಿನ ಹೆಸರಲ್ಲಿ ಗುಣಮುಖರಾಗುತ್ತೀರಿ ಎಂದು ಅಲ್ಲಿ ಹೇಳುತ್ತಾರೆ. ಆದರೆ ಅದೆಲ್ಲವೂ ಫೇಕ್.‌ ಇಂತಹ ಸಾವಿರ ವಿಡಿಯೋಗಳು ವೈರಲ್‌ ಆಗುತ್ತವೆ. ಅದಕ್ಕೆ ಮರುಳಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪಷನೆ ನೀಡಿದ್ದಾರೆ.

ಒಟ್ಟಿನಲ್ಲಿ ತಮ್ಮ ಧರ್ಮದ ಪ್ರಚಾರಕ್ಕೋಸ್ಕರ ದೇವರ ಹೆಸರಿನಲ್ಲಿ ಮೋಸ ಮಾಡುವುದು ಮಾತ್ರ ಕಮ್ಮಿಯಾಗುತ್ತಿಲ್ಲ. ಆರೋಗ್ಯದ ವಿಷಯದಲ್ಲಿ ಯಾರೇನೇ ಹೇಳಿದರೂ ಉತ್ತಮ ಡಾಕ್ಟರ್‌ ಸಲಹೆ ಪಡೆದುಕೊಂಡು ಮುಂದುವರಿಯುವುದೇ ಉತ್ತಮ. ಬಣ್ಣದ ಮಾತಿಗೆ ಮರುಳಾಗಿ ಆರೋಗ್ಯವನ್ನು ಧರ್ಮ ಪ್ರಚಾರಕರ ಕೈಗೆ ನೀಡದೆ ಇರುವುದೇ ಒಳಿತು ಎಂಬುದು ಇಂತಹ ಸನ್ನಿವೇಶಕ್ಕೆ ಒಳಗಾಗಿ ನೊಂದವರ ಅಭಿಪ್ರಾಯ.

ಕೆಲವು ವ್ಯಕ್ತಿಗಳು ಸಮಾಜದ ಮುಗ್ಧ ಜನರ ಭಾವನೆಯೊಂದಿಗೆ ಧರ್ಮದ ಪ್ರಚಾರ ನಡೆಸುವುದು ನೈಜ ಧರ್ಮಕ್ಕೆ ಅಪಚಾರ ಎಸಗಿದಂತೆ. ಇದು ಇಂದು ನಿನ್ನೆಯದಲ್ಲ. ಅದೆಷ್ಟೋ ವರ್ಷಗಳಿಂದ ಇಂತಹ ಸಂಗತಿಗಳು ನಡೆದು ಬರುತಿದ್ದು ಇದಕ್ಕೆ ಪೂರ್ಣವಿರಾಮ ಯಾವಾಗ ಎಂಬುದು ಕಾದು ನೋಡಬೇಕಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page