ಪುತ್ತೂರು ಶಾಸಕರು ಜನರ ಕಿವಿಗೆ ಹೂವು ಇಡುತ್ತಿದ್ದಾರೆ! ಸರ್ಕಾರದ ದುಡ್ಡಲ್ಲಿ ಶಾಸಕರು ತಮ್ಮ ಮನೆಯ ತಡೆಗೋಡೆ ರಚಿಸಿದ್ದಾರೆ!! ಅಶೋಕ್‌ ರೈ ವಿರುದ್ಧ ವಾಗ್ದಾಳಿ ನಡೆಸಿದ ದಯಾನಂದ ಶೆಟ್ಟಿ ಉಜಿರೆಮಾರು!!

ಭಾರತೀಯ ಜನತಾ ಪಾರ್ಟಿ ರೈತರ ಪರವಾಗಿ ಬೆಲೆ ವಿಮೆಯಲ್ಲಿ ಆಗಿರುವ ತೊಂದರೆ ಮತ್ತು ರೈತರಿಗೆ ಅನೇಕ ರೀತಿಯ ತೊಂದರೆಯಾದ ಬಗ್ಗೆ ಪ್ರಶ್ನೆಯನ್ನು ಮಾಡಬೇಕು ಮತ್ತು ಅದರ ವಿರುದ್ಧ ಪ್ರತಿಭಟನೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಇತ್ತೀಚೆಗೆ ದೊಡ್ಡ ಪ್ರತಿಭಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಾವು ಮಾಡಿದ್ದೇವೆ. ನಮ್ಮೆಲ್ಲರ ಶಾಸಕರು ಅವತ್ತು ದತ್ತಾಂಶ ಅಂಕಿ ಅಂಶಗಳ ಪ್ರಕಾರ ನಮ್ಮ ರೈತರಿಗೆ ಆಗಿರುವಂತಹ ಅನ್ಯಾಯವನ್ನು ಜನರ ಮುಂದೆ ಇಡುವ ಮುಖಾಂತರ ಸರಕಾರಕ್ಕೆ ಒತ್ತಯವನ್ನ ಮಾಡಿರುವುದನ್ನು ನಾವು ನೋಡಿದ್ದೇವೆ. ಇವತ್ತು ಈ ರಾಜ್ಯ ಸರಕಾರ ಜನ ವಿರೋಧಿ ನೀತಿಯನ್ನು ನಿತ್ಯ ನಿರಂತರ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಜನರು ಈ ಸರಕಾರಕ್ಕೆ ಶಾಪ ಇಡುವುದನ್ನು ನಾವು ನೋಡಿದ್ದೇವೆ ಎಂದು ಪುತ್ತೂರು ಬಿಜೆಪಿಯ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾಧ್ಯಮಗಳಲ್ಲಿ ಹೇಳಿದರು.

Advertisement

ನಾವು ನಮ್ಮ ರೈತರಿಗೆ ಯಾವ ರೀತಿ ಈ ಕೇಂದ್ರ ಸರಕಾರ ಯೋಜನೆಯನ್ನ ತಂದು ಅದನ್ನು ಯಾವ ರೀತಿ ಅನುಷ್ಠಾನಗೊಳಿಬೇಕು ಅದನ್ನು ಈ ಸರಕಾರ ಮಾಡುತ್ತಿಲ್ಲ ಎನ್ನುವುದನ್ನು ಇವತ್ತಿನ ವಿಮೆ ಕಂಪನಿಯ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡು ಅದಕ್ಕೆ ಬೇಕಾದ ರೀತಿಯಲ್ಲಿ ಹಾಗೂ ಇವರಿಗೆ ಬೇಕಾದ ರೀತಿಯಲ್ಲಿ ಇವರು ರೈತರಿಗರ ಬರುವ ಹಣವನ್ನು ಕೂಡ ನುಂಗುವಂತ ಭ್ರಷ್ಟಾಚಾರಕ್ಕೆ ಇಳಿದಿರುವುದನ್ನು ಜನರು ನೋಡುತ್ತಿದ್ದಾರೆ. ನಮ್ಮ ಜಿಲ್ಲೆಯ ಎಲ್ಲಾ ಶಾಸಕರುಗಳು ನಮ್ಮ ರಾಜ್ಯದಲ್ಲಿ ಬಿಜೆಪಿ ಸರಕಾರದ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ 2 ಸಾವಿರ ಕೋಟಿ 3 ಸಾವಿರ ಕೋಟಿ ಕೆಲಸ ಆಗಿರುವಂತದನ್ನು ಜನರು ನೋಡಿದ್ದಾರೆ. ನಮ್ಮ ಪುತ್ತೂರಿನಲ್ಲಿ ಸರಿಸುಮಾರು 2.5 ಸಾವಿರ ಕೋಟಿ ಹಣವನ್ನು ನಾವು ನಮ್ಮ ಶಾಸಕರದಂಹ ಸಂಜೀವ ಮಠಂದೂರು ಅವರು ತಂದಿದ್ದರು. ಇವರು ಅಭಿವೃದ್ಧಿಯನ್ನು ಮಾತಾನಾಡುವುದಾದರೇ, ಅಂಕಿ ಅಂಶ ವನ್ನು ಜನರ ಮುಂದೆ ಹೇಳುವುದಕ್ಕೆ ನಾವು ಸಿದ್ದರಿದ್ದೇವೆ.
ಅದು ಬಿಟ್ಟು ಪುತ್ತೂರಿನಲ್ಲಿ ಏನೂ ಅಭಿವೃದ್ಧಿ ಮಾಡದೆ ಈಗ ಕಾಣುವ ಹಾಗೇ ಬೊಳುವಾರಿನಿಂದ ಉಪ್ಪಿನಂಗಡಿಗೆ ಹೋಗಿರುವಂತ ರಸ್ತೆ ಪ್ರಮುಖ ರಸ್ತೆಯಲ್ಲಿ ನಮ್ಮ ಸಂಜೀವ ಮಠಂದೂರು ಮಾಡಿರುವ ಅಭಿವೃದ್ಧಿ ಬಿಟ್ಟರೆ, ಈಗ ಇವರೇನು ಮಾಡಿಲ್ಲ. ಬಂದಿರುವ ದುಡ್ಡುನ್ನು ಅವರ ಮನೆಯ ತಡೆಗೋಡೆಗೆ ಉಪಯೋಗ ಮಾಡಿಕೊಂಡಿರುವುದನ್ನು ಇಡೀ ಜನ ನೋಡಿದ್ದಾರೆ. ಇವತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನೇಕಪ್ರ ಭ್ರಷ್ಟಾಚಾರಗಳು ನಡೆಯುತ್ತಿವೆ. ಇದಕ್ಕೆ ಉತ್ತರ ಕೊಡಲಿಲ್ಲ. ಪುತ್ತೂರಿನ ಜನರಿಗೆ ಕಿವಿಗೆ ಹೂ ಇಡುವ ಕೆಲಸವನ್ನು ಇಲ್ಲಿ ಶಾಸಕರು ಮಾಡಿದ್ದಾರೆ. ಜನ ಅದನ್ನು ಒಪ್ಪುವುದಿಲ್ಲ. ಶಾಸಕರೇ ದಯವಿಟ್ಟು ಅಂಕಿ ಅಂಶವನ್ನು ತಿಳಿದುಕೊಳ್ಳಿ ಸರಿಯಾದ ಮಾಹಿತಿಯನ್ನು ತೆಗೆದುಕೊಳ್ಳಿ. ಆ ಮುಖಾಂತರ ಜನರಿಗೆ ಸರಿಯಾದ ಮಾಹಿತಿಯನ್ನು ಕೊಡುವಂತ ಕೆಲಸವನ್ನು ಬಿಟ್ಟು ಈ ರೀತಿ ಉಡಾಫೆ ವರ್ತನೆಯನ್ನು ಮಾಡಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ರೆ ಬಜೆಪಿಯು ಬೀದಿಗೆ ಇಳಿದು ನಿಮ್ಮ ವಿರುದ್ಧ ಹೋರಾಟವನ್ನು ಅನಿವಾರ್ಯವಾಗುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page