“ಮನೆಗೆ ಬಂದಾಗ ನಾನು ರಾಧಿಕಾಪತಿ” | ಯಶ್‌ ಮಾತಿಗೆ ರಾಧಿಕಾ ಪಂಡಿತ್‌ ಫಿದಾ!!

ಬೆಂಗಳೂರು : ಒರಾಯನ್‌ ಮಾಲ್‌ನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಟ ಯಶ್ ಅವರ ಮಾತುಗಳು ಗಮನ ಸೆಳೆದಿವೆ. ರಾಮಾಯಣ ಸಿನಿಮಾದಲ್ಲಿ ನಟಿಸಿರುವ ರಣಬೀರ್ ಕಪೂರ್, ಸಾಯಿ ಪಲ್ಲವಿ, ಎ.ಆರ್. ರೆಹಮಾನ್ ಸೇರಿದಂತೆ ಹಲವರ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ವಿಶೇಷ ಏನೆಂದರೆ ಪತ್ನಿ ರಾಧಿಕಾ ಪಂಡಿತ್ ಅವರ ಬಗ್ಗೆ ಆಡಿದ ಮಾತುಗಳು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Advertisement

‘ಸೀತೆ ಇಲ್ಲೇ ಇದ್ದಾರೆ ರಾಧಿಕಾ. ರಾವಣ ಆಗಲಿ, ರಾಯ ಆಗಲಿ, ರಾಕಿ ಆಗಲಿ, ರಾಜಾಹುಲಿ ಆಗಲಿ ಏನೇ ಆದ್ರೂ ಮನೆಗೆ ಬಂದರೆ ನಾನು ರಾಧಿಕಾಪತಿಯೇ ’ ಎಂದು ಹೇಳುವ ಮೂಲಕ ರಾಧಿಕಾ ಪಂಡಿತ್ ಅವರ ಮೇಲಿರುವ ಪ್ರೀತಿಯನ್ನು ಯಶ್ ವ್ಯಕ್ತಪಡಿಸಿದರು. ‘ಎಲ್ಲರೂ ಒಂದನ್ನು ಅರ್ಥ ಮಾಡಿಕೊಳ್ಳಿ. ಕೆಲವೊಮ್ಮೆ ನಮಗೆ ಸಿಕ್ಕಿರುವ ಶಕ್ತಿಯಲ್ಲಿ ಉದ್ಯಮಕ್ಕೂ ಏನಾದರೂ ಮಾಡುತ್ತಾ ಹೋಗಬೇಕಾಗುತ್ತದೆ. ಇಂದು ನನಗೆ ತುಂಬಾ ಖುಷಿಯಾಗಿದೆ. ಪ್ರೇಮದ ಊರಲಿ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಆ ಚಿತ್ರತಂಡದ ಜೊತೆಗೆ ನಾನು ಮಾತನಾಡಿದೆ. ಅವರ ಕಣ್ಣುಗಳಲ್ಲಿ ಖುಷಿ ನೋಡಿದೆ. ಕನ್ನಡ ಚಿತ್ರರಂಗದಲ್ಲಿ ಹೊಸಹೊಸ ಪ್ರತಿಭೆಗಳು ಬರಬೇಕು, ನಿರ್ದೇಶಕರು ಚಿಕ್ಕ ಚಿಕ್ಕ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿರಬೇಕು’ ಎಂದಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page