ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಜರ್ಲೆಂಡ್ ಆಗಿದ್ದಾಕೆ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. 1993ರಲ್ಲಿ ತನ್ನ ಮೇಲೆ ಟ್ರಂಪ್ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾರೆ ಎಂದು ಮಾಡೆಲ್ ಬಿಯಾಟ್ರಿಸ್ ಕಾಯ್ಲ್ ಆರೋಪಿಸಿರುವ ಬಗ್ಗೆ ಡೆಮಾಕ್ರೆಟ್ ನಾಯಕರು ವರದಿ ಸಲ್ಲಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ, ಕಾಯ್ಲ್ 24 ವರ್ಷದವಳಿದ್ದಾಗ ನ್ಯೂಯಾರ್ಕ್ನ ಪ್ಲಾಜಾ ಹೋಟೆಲ್ನಲ್ಲಿ ನಡೆದ ಸೌಂದರ್ಯ ಸ್ಪರ್ಧೆ ವೇಳೆ ಟ್ರಂಪ್ ಆಕೆಯನ್ನು ಭೇಟಿಯಾಗಿದ್ದು, ಆಕೆಯ ರೂಮ್ನಲ್ಲಿ ಬಲವಂತವಾಗಿ ಅತ್ಯಾಚಾರವೆಸಗಿದ್ದರು. ಈ ವೇಳೆ ಕಾಯ್ಲ್ಗೆ ಹಲವು ಗಾಯಗಳಾಗಿ ರಕ್ತಸ್ರಾವವಾಗಿತ್ತು ಎಂದು ವರದಿಯಾಗಿದೆ.














