14 ಲಕ್ಷ ಇನ್ಸ್ಟಾಗ್ರಾಂ ಫಾಲೋವರ್ಸ್‌ ; ಚುನಾವಣೆಯಲ್ಲಿ ಸಿಕ್ಕಿದ್ದು ಕೇವಲ 33 ಮತಗಳು! ಚುನಾವಣೆಯಲ್ಲಿ ಜ್ಯೋತಿಷಿಯ ಭವಿಷ್ಯ ಅತಂತ್ರ!!

ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿನ ಇನ್ಫ್ಲುಯೆನ್ಸರ್, ಜ್ಯೋತಿಷಿ, ಮುಖ ಲಕ್ಷಣಕಾರ ಓಂಪ್ರಕಾಶ್ ಬಿಷ್ಣೋಯ್ ಸರ್ಪಂಚ್ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋತಿದ್ದು ಈಗ ದೇಶಾದ್ಯಂತ ದೊಡ್ಡ ಸುದ್ದಿ ಆಗಿದೆ. ಹಾಗೆ ನೋಡಿದರೆ ಭಿಷ್ಣೋಯ್ ಸಾಮಾನ್ಯ ವ್ಯಕ್ತಿ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ ಫಾಲೋವರ್ಸ್ ಇದ್ದರೆ ಫೇಸ್‌ಬುಕ್‌ನಲ್ಲಿ 2ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅಂದಾಜು 5 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ ಇದ್ದಾರೆ. ಒಟ್ಟಿನಲ್ಲಿ 21ಲಕ್ಷಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಫಾಲೋವರ್ಸ್ ಹೊಂದಿದ್ದರು ಎಂದು ಜಾಲತಾಣ ಮೂಲಗಳು ತಿಳಿಸಿವೆ.

Advertisement

ಇದೇ ವೇಳೆ ಆತನ ಊರಲ್ಲಿ ಸರ್ಪಂಚ್ ಚುನಾವಣೆ ಘೋಷಣೆ ಆಯಿತು. ತನ್ನ ಸ್ಥಾನಮಾನವನ್ನು ಪರೀಕ್ಷೆಗೊಡ್ಡುವ ಕಾಲ ಬಂತು. ಹೇಗೂ ತನಗೆ 21ಲಕ್ಷ ಹಿಂಬಾಲಕರು ಇದ್ದಾರೆ. ಹೀಗಿರುವಾಗ 1600 ಮತಗಳಿರುವ ತನ್ನ ಸ್ವಂತ ಗ್ರಾಮದಲ್ಲಿ ಗೆಲ್ಲುವುದು ಕಷ್ಟದ ವಿಷಯವೇ ಅಲ್ಲ ಎಂದು ಯೋಚಿಸಿ ಚುನಾವಣಾ ಕಣಕ್ಕೆ ಇಳಿದೇ ಬಿಟ್ಟ.
ಊರಿಡೀ ಓಡಾಡಿದ. ಭಿಷ್ಣೋಯ್, ಸರ್ಪಂಚ್ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲ್ಲಬಹುದೆಂಬ ಮನಸ್ಥಿತಿಗೆ ತಲುಪಿದರು. ಇನ್ನೇನು ಸರ್ಪಂಚ್‌ ಆಗಿ ಆಯ್ಕೆ ಆಗೇ ಬಿಟ್ಟೆ ಎಂಬ ಅತೀ ಆತ್ಮ ವಿಶ್ವಾಸ ದಿಂದ ಗ್ರಾಮದಲ್ಲಿ ತಿರುಗಾಡಿದ್ದೆ ತಿರುಗಾಡಿದ್ದು. ಚುನಾವಣೆ ದಿನ ಬಂದೇ ಬಿಟ್ಟಿತು. ಮತದಾನ ದಿನ ಕೂಡ ಅದೇ ಅತೀ ಆತ್ಮ ವಿಶ್ವಾಸ. ನಂತರ ಚುನಾವಣಾ ಮತ ಎಣಿಕೆ ಆರಂಭವಾಯಿತು. ಲಕ್ಷ ಲಕ್ಷ ಸಾಮಾಜಿಕ ಜಾಲತಾಣ ಬೆಂಬಲಿಗರನ್ನು /ಹಿಂಬಾಲಕರನ್ನು ಹೊಂದಿರುವಾಗ ತನ್ನ ಗ್ರಾಮದಲ್ಲಿ ಗೆಲ್ಲುವುದು ದೊಡ್ಡ ವಿಷಯವೇ ಅಲ್ಲ. ಗೆದ್ದೇ ತೀರುತ್ತೇನೆ ಎಂಬ ರಣೋತ್ಸಾಹದಲ್ಲಿದ್ದರು. ಯಾವಾಗ ಚುನಾವಣಾ ಫಲಿತಾಂಶ ಹೊರಬಂತೋ ಬಿಷ್ಣೋಯ್ ಅವರಿಗೆ ವಸ್ತುಶಃ ಧರಾಶಾಹಿ ಆದ ಅನುಭವ. ನಿಂತ ನೆಲ ಅಲುಗಾಡಿದಂತಾಯಿತು. ಮೈ ತಣ್ಣಗಾದ ಅನುಭವ ಆಯಿತು. ಅಷ್ಟಕ್ಕೂ ಬಿಷ್ಣೋಯ್ ಅವರಿಗೆ ದೊರೆತದ್ದು ಕೇವಲ ಅಂದರೆ ಕೇವಲ 33 ಮತಗಳು. ದೊರೆತ 33ಮತಗಳಲ್ಲಿ 11ಮತಗಳು ಕುಟುಂಬ ಸದಸ್ಯರದ್ದೇ ಎಂದು ವರದಿ ತಿಳಿಸಿದೆ. ಇನ್ನೊಂದು ಆಸಕ್ತಿದಾಯಕ ಸುದ್ದಿ ಎಂದರೆ 40 ನೋಟಾ ಮತಗಳು ಭಿಷ್ಣೋಯ್ ಕ್ಷೇತ್ರದಲ್ಲಿ ಬಿದ್ದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page