ಪುತ್ತೂರು ಶಾಸಕರಿಂದ ದೇವಸ್ಥಾನದಲ್ಲಿ ಬೋಗಸ್‌ ಸಮಿತಿ ರಚನೆ! ಜೈನರು ಮಹಾಲಿಂಗೇಶ್ವರ ದೇವಸ್ಥಾನದ ಕುರಿತು ಪ್ರಶ್ನೆ ಮಾಡಬಾರದೇ?? ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಆಕ್ರೋಶ!!

ಪುತ್ತೂರು ಅಕ್ಟೋಬರ್ 29: ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ಧಾರ ವಿಚಾರದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಇದು ಧಾರ್ಮಿಕ ದತ್ತಿ ಇಲಾಖೆಯ ಸ್ಪಷ್ಟ ನಿಯಮಗಳ ಉಲ್ಲಂಘನೆಯಾಗಿದೆ ಎಂದು ‘ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ’ ಗಂಭೀರ ಆರೋಪ ಮಾಡಿದೆ. ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಸದಸ್ಯ ದಿನೇಶ್ ಕುಮಾರ್ ಜೈನ್, ಶಾಸಕರ ವರ್ತನೆಯನ್ನು ಪ್ರಶ್ನಿಸಿದರು.

Advertisement

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ವೇದಿಕೆಯ ಸದಸ್ಯ ದಿನೇಶ್ ಕುಮಾರ್ ಜೈನ್ ಸದ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ವ್ಯವಸ್ಥಾಪನಾ ಸಮಿತಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಶಾಸಕರು ಅವಕಾಶ ನೀಡುತ್ತಿಲ್ಲ. ದೇವಸ್ಥಾನದ ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿರುವ ವ್ಯವಸ್ಥಾಪನಾ ಸಮಿತಿಯ ಕಛೇರಿಯ ಅಧ್ಯಕ್ಷರ ಕುರ್ಚಿಯಲ್ಲಿ ಅಧ್ಯಕ್ಷರನ್ನು ಹೊರತುಪಡಿಸಿ ಯಾರೂ ಕುಳಿತುಕೊಳ್ಳಲು ಅವಕಾಶವಿಲ್ಲ. ಆದರೆ ಶಾಸಕರು ಮಾತ್ರ ಅದೇ ಕುರ್ಚಿಯಲ್ಲಿ ಕುಳಿತು ಸಭೆ ನಡೆಸುತ್ತಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನ ಆಯ್ಕೆಯಾದ ಬಳಿಕ ಆತನೇ ಕ್ಷೇತ್ರದ ಮತ್ತು ದೇವರ ಪ್ರತಿನಿಧಿಯಾಗಿರುತ್ತಾನೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶಾಸಕರು ಆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.

Advertisement
Advertisement

ಕ್ಷೇತ್ರದಲ್ಲಿ ನಡೆಯುತ್ತಿರುವ ಭಕ್ತರ ಧಾರ್ಮಿಕ ಭಾವನೆಗೆ ವಿರುದ್ಧವಾದ ಕೆಲಸಗಳನ್ನು ಸಂರಕ್ಷಣಾ ಸಮಿತಿ ವಿರೋಧಿಸುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೆ ಶಾಸಕರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ. ಬೋಗಸ್ ಸಮಿತಿಯ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಇದೀಗ ದೇವಸ್ಥಾನದ ಪುಷ್ಕರಣಿಯ ಸಮೀಪದಲ್ಲೇ ಶೌಚಾಲಯವನ್ನು ನಿರ್ಮಿಸಲು ಹೊರಟಿದ್ದಾರೆ. ಶೌಚಾಲಯದ ಪಕ್ಕದಲ್ಲೇ ಪುಷ್ಕರಣಿ ಇರುವ ಕಾರಣ, ಶೌಚಾಲಯದ ನೀರು ಪುಷ್ಕರಣಿ ಸೇರುವ ಸಾಧ್ಯತೆಯಿದೆ. ದೇವರಿಗೆ ಇದು ಅಸಮಾಧಾನ ತಂದಿದೆ ಎನ್ನುವುದಕ್ಕೆ ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಜಾಗದಲ್ಲೇ ನಾಗರಹಾವೊಂದು ನಿರಂತರವಾಗಿ ಕಾಣಿಸಿಕೊಳ್ಳುವುದೇ ಸಾಕ್ಷಿ ಎಂದ ಅವರು ನಾಗರಹಾವು ಈ ರೀತಿ ಅದೇ ಜಾಗದಲ್ಲಿ ಕಾಣಲು ಕಾರಣವೇನು ಅನ್ನೋದರ ಬಗ್ಗೆ ವ್ಯವಸ್ಥಾಪನಾ ಸಮಿತಿ ಪ್ರಶ್ನೆ ಚಿಂತನೆಯಲ್ಲಿ ಯಾಕೆ ಕೇಳಿಲ್ಲ ಎಂದು ಪ್ರಶ್ನಿಸಿದ ಅವರು ಜೈನ ಮತಕ್ಕೆ ಸೇರಿದ ನನ್ನ ವಿರುದ್ಧ ಶಾಸಕರು ದೇವಸ್ಥಾನದ ಕುರಿತು ಪ್ರಶ್ನೆ ಮಾಡುವಂತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೆ ಹಿಂದೂ ಮತ್ತು ಜೈನ ಧರ್ಮದ ಆರಾಧನಾ ವಿಧಿಗಳು ಪರಸ್ಪರ ಒಂದೇ ರೀತಿಯದ್ದಾಗಿದ್ದು, ಸಂವಿಧಾನದಲ್ಲೂ ಪ್ರಶ್ನೆ ಮಾಡುವ ಅವಕಾಶವನ್ನು ಕೊಡಲಾಗಿದೆ. ಶಾಸಕರು ಮೊದಲು ಸಂವಿಧಾನವನ್ನು ಸರಿಯಾಗಿ ಓದುವ ಕೆಲಸವನ್ನು ಮಾಡಿದ ಬಳಿಕ ನಮ್ಮ ಬಗ್ಗೆ ಮಾತನಾಡಬೇಕು ಎಂದರು. ಅಯ್ಯಪ್ಪ ಸ್ವಾಮಿಯ ಗುಡಿಯನ್ನು ಕೆಡವಿ ಇದೀಗ ಸ್ವಾಮಿಗೆ ನಿತ್ಯ ಪೂಜೆ ಇಲ್ಲದಂತೆ ಮಾಡಲಾಗಿದೆ. ಒಂದು ವೇಳೆ ಅಯ್ಯಪ್ಪ ಸ್ವಾಮಿಗೆ ಬೇರೆ ಗುಡಿ ಕಟ್ಟುವ ಯೋಜನೆಗಳಿದ್ದಲ್ಲಿ, ಗುಡಿಯನ್ನು ಕಟ್ಟಿದ ಬಳಿಕ ಹಳೆಯ ಗುಡಿಯನ್ನು ತೆರವುಗೊಳಿಸಬೇಕಿತ್ತು‌. ದೇವಸ್ಥಾನದ ಲೆಕ್ಕಾಚಾರದಲ್ಲೂ ಹಲವು ಭ್ರಷ್ಟಾಚಾರ ನಡೆದಿದ್ದು, ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ತನಿಖೆಯನ್ನು ಆರಂಭಿಸಿದ್ದು, ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page