ಗೋಹತ್ಯೆಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ! ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ಗುಜರಾತ್‌ ನ್ಯಾಯಾಲಯ ತೀರ್ಪು!!

ಗುಜರಾತ್‌ : ಗೋಹತ್ಯೆ ಪ್ರಕರಣದಲ್ಲಿ 277 ಕೆ.ಜಿ ಗೋಮಾಂಸದೊಂದಿಗೆ ಸಿಕ್ಕಿಬಿದ್ದಿದ್ದ ಮೂವರು ಆರೋಪಿಗಳಿಗೆ ಗುಜರಾತ್‌ನ ಗಾಂಧಿನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತೀರ್ಪಿನ ವೇಳೆ ಗೋವಿನ ಧಾರ್ಮಿಕ ಮಹತ್ವವನ್ನು ಒತ್ತಿಹೇಳಲು ನ್ಯಾಯಾಲಯವು ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿದೆ ಎಂದು ವರದಿಯಾಗಿದೆ.

Advertisement

ಹೆಚ್ಚುವರಿ ಸೆಷನ್ಸ್‌ ನ್ಯಾಯಧೀಶ ಬಿ.ಆರ್‌. ರಜಪೂತ್‌ ಅವರು ಸೋಮವಾರ ನೀಡಿದ ತೀರ್ಪಿನಲ್ಲಿ ಅರರಾಧಿಗಳಾದ ವಾಸಿಂ ಖುರೇಷಿ, ಮೊಹಮ್ಮದ್‌ ರಫೀಕ್‌ ಖುರೇಷಿ ಮತ್ತು ಅಸ್ಫಾಕ್‌ ಬಹೇಲಿಮ್‌ ಅವರಿಗೆ ಜೀವಾವಧಿ ಶಿಕ್ಷೆಯ ಜತೆಗೆ 3ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ಗೋವಿನ ಧಾರ್ಮಿಕ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಮನುಸ್ಮೃತಿ ಸೇರಿದಂತೆ ಹಿಂದೂ ಧರ್ಮ ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ.

Advertisement
Advertisement

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಂಘವಿ, ರಾಜ್ಯದಲ್ಲಿ ಗೋಹತ್ಯೆ ಎಸಗುವವರನ್ನು ಕಾನೂನು ಎಂದಿಗೂ ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ರವಾನಿಸಿದೆ ಎಂದು ಹೇಳಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page