ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಇನ್ಫ್ಲುಯೆನ್ಸರ್ ನಿಖಿಲ್ ಗೌಡ ಇದೀಗ ಗಂಭೀರ ಆರೋಪವೊಂದರಿಂದ ಸುದ್ದಿಯಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದ ನಿಖಿಲ್ ಗೌಡ ಅಪಘಾತದ ಬಳಿಕ ವಾಹನ ನಿಲ್ಲಿಸದೆ ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ಎಂಬುವವರ ಕೈ ಮುರಿದಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.
ಮೈಸೂರಿನ ವಿಜಯನಗರದ ರಿಂಗ್ ರೋಡ್ ಸಮೀಪ ಕಳೆದ ತಿಂಗಳ 20ರಂದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಭಿಷೇಕ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎಂಬುದು ಸಂತ್ರಸ್ತರ ಆರೋಪ. ಕಾರನ್ನು ಇನ್ಫ್ಲುಯೆನ್ಸರ್ ನಿಖಿಲ್ ಗೌಡ ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಅಭಿಷೇಕ್ ಗೆ ಗಾಯಗಳಾಗಿದ್ದು, ಕೈ ಮುರಿದಿದೆ ಎಂದು ವರದಿಯಾಗಿದೆ.












