ಭಾರತೀಯ ಮತದಾರರನ್ನು ಸೆಳೆಯಲು ಅಮೆರಿಕ ಮಾಸ್ಟರ್ ಪ್ಲಾನ್! ಅಮೆರಿಕನ್ನರಿಂದ ದೇವಾಲಯಗಳ ಭೇಟಿ!!

ಅಮೆರಿಕ: ನ.3 ರಂದು ಅಮೆರಿಕದಲ್ಲಿ ಮಧ್ಯಾಂತರ ಚುನಾವಣೆ ನಡೆಯಲಿದ್ದು, ಭಾರತೀಯ ಮತದಾರರನ್ನು ಸೆಳೆಯಲು ಭಾರತೀಯ ರೆಸ್ಟೋರೆಂಟ್‌ಗಳು, ದೇವಾಲಯಗಳ ಭೇಟಿ ಮತ್ತು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

Advertisement

ಡೆಮಾಕ್ರಟಿಕ್‌ ಅಭ್ಯರ್ಥಿ ಜೇಮ್ಸ್‌ ಟೆಲಾರಿಕೋ ಅತೀ ಹೆಚ್ಚು ಭಾರತೀಯರು ನೆಲೆಸಿರುವ ಡಲ್ಲಾಸ್‌ ನಗರದ ಹೊರವಲಯದಲ್ಲಿರುವ ಹೋಟೆಲ್‌ ಬೇಟಿ ನೀಡಿ ದೋಸೆ ಚಪ್ಪರಿಸಿದ್ದಾರೆ. ಭಾರತೀಯರು ಹೆಚ್ಚಾಗಿರುವ ಕಡೆಗಳಲ್ಲಿರುವ ದೇಗುಲಗಳಿಗೆ ಎರಡೂ ಪಕ್ಷಗಳ ಅಭ್ಯರ್ಥಿಗಳು ದಾಂಗುಡಿಯಿಡುತ್ತಿದ್ದಾರೆ. ಡೆಮಾಕ್ರಟಿಕ್‌ ಅಭ್ಯರ್ಥಿ ಗ್ರೇಗ್‌ ಲ್ಯಾಂಡ್‌ಮನ್‌ ಅವರು ಓಹಿಯೊದಲ್ಲಿರುವ ಬಾಪ್ಸ್‌ ಸ್ವಾಮಿನಾಥನ್‌ ದೇಗುಲದಲ್ಲಿ ಇತ್ತೀಚೆಗೆ ನಡೆದ ಉತ್ಸವದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ನ್ಯೂಜೆರ್ಸಿಯ ಡೆಮಾಕ್ರಟಿಕ್ ಅಭ್ಯರ್ಥಿ ಕೋರಿ ಬೂಕರ್, ಇತ್ತೀಚೆಗೆ, ಅಕ್ಟರ್‌ಧಾಮ್ ದೇಗುಲದಲ್ಲಿ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿದ್ದು, ರಿಪಬ್ಲಿಕನ್ ಅಭ್ಯರ್ಥಿಗಳಾದ ರ‍್ಯಾಂಡಿ ಫೈನ್, ಸ್ಕಾಟ್ ಪೆರ್ರಿ ಅವರು ಹ್ಯಾರಿಸ್ ಬರ್ಗ್ ನಲ್ಲಿರುವ ದೇಗುಲದಲ್ಲಿ ಜಾನ್ಸ್ ಜೇಮ್ಸ್ ಅವರು ಮಿಚಿಗನ್‌ನಲ್ಲಿರುವ ಸ್ವಾಮಿನಾಥನ್ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page