ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ರಾಜೀನಾಮೆ ಪರ್ವ! ಎರಡು ದಿನದಲ್ಲಿ ಮೂರು ಶಾಸಕರ ರಾಜೀನಾಮೆ!!

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ರಾಜೀನಾಮೆ ಪರ್ವ ಮುಂದುವರಿದಿದ್ದು, ಪಕ್ಷದಿಂದ ಅಮಾನತುಗೊಂಡಿರುವ ಶಾಸಕ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಕುನ್ವರ್‌ ವಿಜಯ್‌ ಪ್ರತಾಪ್‌ ಸಿಂಗ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಈ ರೀತಿ ರಾಜೀನಾಮೆ ನೀಡಿದ ಮೂರನೇ ಶಾಸಕ ಇವರಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಆಪ್‌ ಶಾಸಕರ ರಾಜೀನಾಮೆಯಿಂದಾಗಿ 2027ರಲ್ಲಿ ನಡೆಯಲಿರುವ ಪಂಜಾಬ್‌ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಮ್‌ ಆದ್ಮಿ ಪಕ್ಷವು ರಾಜಕೀಯವಾಗಿ ಸಮಸ್ಯೆ ಎದುರಾಗಿದೆ. ಅಮೃತಸರ ಉತ್ತರ ಕ್ಷೇತ್ರದಿಂದ ಶಾಸಕರಾಗಿರುವ ಸಿಂಗ್‌, ತಮ್ಮ ರಾಜೀನಾಮೆಯನ್ನು ಸ್ಪೀಕರ್‌ ಕುಲ್ತಾರ್‌ ಸಿಂಗ್‌ ಸಾಂಧ್ವಾನ್‌ ಅವರಿಗೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ. ರಾಜೀನಾಮೆ ನೀಡಿದ ಆಪ್‌ ಶಾಸಕರು ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.

Advertisement
Advertisement

“ಅಮೃತಸರದ ನನ್ನ ಅತ್ಯಂತ ಗೌರವಾನ್ವಿತ ಸಹೋದರ ಸಹೋದರಿಯರೇ, ನಾನು ಪಂಜಾಬ್‌ ವಿಧಾನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನೀವು ನನಗೆ ತೋರಿದ ಪ್ರೀತಿ ಮತ್ತು ಗೌರವಕ್ಕಾಗಿ, ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮಗೆ ಋಉಣಿಯಾಗಿರುತ್ತೇನೆ”, ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page