ಪುತ್ತೂರು : ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಮುಖಂಡ ಯತೀಶ್ ಆರ್ವರ್ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರ ಮಾತುಗಳು ಹೀಗಿವೆ :
ಪುತ್ತೂರಿನ ಶಾಸಕರಿಗೆ ಯಾರು ದೇವಸ್ಥಾನದಲ್ಲಿ ಊಟ ಮಾಡಿ ದುಡ್ಡು ಕೊಡದೆ ಹೋಗುತ್ತಾರೆ ಎನ್ನುವ ಲೆಕ್ಕ ಸಿಗುತ್ತೆ. ಆದರೆ ಪುತ್ತೂರಿನ ಭವಿಷ್ಯವನ್ನು ಹಾಳು ಮಾಡುವ ಗಾಂಜಾ, ಅಫೀಮ್ ಮಾರಾಟ ಮಾಡುವವರು ಜೊತೆಗೆ ಮಧ್ಯರಾತ್ರಿ ತನಕ ಅಂಗಡಿ ಮುಂಗಟ್ಟುಗಳು ಕಾನೂನನ್ನು ಮೀರಿ ತೆರೆದಿರುವುದು ಅಶೋಕ್ ರೈಗಳಿಗೆ ಕಾಣೋದೇ ಇಲ್ಲ.
ಶಾಸಕರೇ, ನಿಮಗೆ ತಾಕತ್ತಿದ್ದರೆ ಯಾರು ದೇವಸ್ಥಾನದಲ್ಲಿ ಶಾಲು ಹಾಕಿ ಧರ್ಮಕ್ಕೆ ಎಳನೀರು ಕುಡಿದು ಹೋಗುವವರ ಪಟ್ಟಿ ಹಾಕಿ. ದುಟ್ಟು ಕೊಡದವರು ದೇವಸ್ಥಾನಕ್ಕೆ ಬರಬೇಡಿ ಎನ್ನುವ ಪಟ್ಟಿ ಹಾಕಿ. ಆದರೆ ಒಂದು ನೆನಪಿರಲಿ. ನಾವು ದೇವಸ್ಥಾನಕ್ಕೆ ಹೋಗುವುದು ಶಾಸಕರನ್ನು ಕೇಳಿಕೊಂಡಲ್ಲ. ಅವರ ಅನುಮತಿ ನಮಗೆ ಬೇಡ. ನಾವು ಮಹಾಲಿಂಗೇಶ್ವರ ದೇವರ ಬಳಿ ಭಕ್ತಿಯಲ್ಲಿ ಹೋಗುವವರು. ನಮ್ಮ ಭಕ್ತಿಯನ್ನೇ ಹಿಯಾಲಿಸಿದ್ದೀರಿ ನೀವು. ತಾಕತ್ತಿದ್ದರೆ ದುಡ್ಡು ಕೊಡದವರು ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿ. ಅಮೇಲೆ ಇದನ್ನೆಲ್ಲಾ ಮಹಾಲಿಂಗೇಶ್ವರ ದೇವರೇ ತೀರ್ಮಾನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.















