ತ್ರಿಕೋನ ಪ್ರೇಮ ಪಾಶಕ್ಕೆ ಪಿಯುಸಿ ವಿದ್ಯಾರ್ಥಿ ಬಲಿ!! ಗೆಳತಿಯ ಮಾಜಿ ಗೆಳೆಯನನ್ನು ಮುಗಿಸಿಯೇ ಬಿಟ್ಟ ಹೊಸ ಪ್ರೇಮಿ!!

ಕೇರಳ : ಪ್ರೇಮ ವೈಷಮ್ಯ ಹಿನ್ಬಲೆಯಲ್ಲಿ ಫಸ್ಟ್‌ ಪಿಯುಸಿ ವಿದ್ಯಾರ್ಥಿ ಎ.ಡಿ. ಅಭಿರಾಮ್‌ (17) ಎಂಬಾತನನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಎಸೆದಿರುವ ಘಟನೆ ಕೇರಳದ ರಾಜಧಾನಿ ತಿರುವನಂತಪುರಂ ಪಂಗಪ್ಪಾರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕ, ಆತನ ಮಾಜಿ ಗೆಳತಿ ಅನಂತ (18) ಹಾಗೂ ವಿಲೇವಾರಿಗೆ ನೆರವಾದ ರೌಡಿಶೀಟರ್‌ ಉಮರ್‌ (21) ಮೂವರು ಆರೋಪಿಗಳನ್ನು ಶ್ರೀಕರಿಯಂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ವರದಿಯಾಗಿದೆ.

Advertisement

ಅಪ್ರಾಪ್ತ ಬಾಲಕ ಹಾಗೂ ಆತನ ಮಾಜಿ ಗೆಳತಿ ಅನಂತ ಇತ್ತೀಚೆಗೆ ಬೇರ್ಪಟ್ಟಿದ್ದರು. ಬಳಿಕ ಅನಂತ ಮತ್ತೊಬ್ಬ ಯುವಕನ ಜೊತೆ ಸಲುಗೆಯಿಂದಿದ್ದಳು. ಇದರಿಂದ ಕೆರಳಿದ ಅಪ್ರಾಪ್ತ, ಆ ಹೊಸ ಗೆಳೆಯನನ್ನು ಕೊಲ್ಲಲು ಸಂಚು ರೂಪಿಸಿದ್ದನು. ಆ ಗೆಳೆಯನ ಆಪ್ತ ಸ್ನೇಹಿತನಾಗಿದ್ದ ಅಭಿರಾಮ್‌ನನ್ನು ಹೆದರಿಸಿ, ಹೊಸ ಗೆಳೆಯನನ್ನು ನಿರ್ಜನ ಪ್ರದೇಶಕ್ಕೆ ಕರೆಸಲು ಯೋಜನೆ ಹಣೆದಿದ್ದನು. ಅನಂತಳ ಫೋನ್‌ನಿಂದ ಸಂದೇಶ ಕಳುಹಿಸಿ ಅಭಿರಾಮ್‌ನನ್ನು ಕರೆಸಿಕೊಂಡ ಆರೋಪಿ, ಸ್ನೇಹಿತನಿಗೆ ಕರೆ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ಆ ಸ್ನೇಹಿತ ಸ್ಥಳಕ್ಕೆ ಬರಲಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿ ಅಭಿರಾಮ್‌ ಓಡಿಹೋಗಲು ಯತ್ನಿಸಿದಾಗ, ತಲೆಗೆ ಹೊಡೆದು ತಡೆದ ಅಪ್ರಾಪ್ತ, ತನ್ನ ಸೊಂಡದ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಉಮಾರ್‌ನ ನೆರವಿನಿಂದ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಶ್ರೀಕರಿಯಂನ ಕಮುಕಿನ್‌ ಕೋಡ್‌ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶಕ್ಕೆ ಎಸೆದಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಭಾನುವಾರದಿಂದ ನಾಪತ್ತೆಯಾಗಿದ್ದ ಅಭಿರಾಮ್‌ ಕುಟುಂಬರಸ್ಥರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ಮತ್ತು ಸೋಶಿಯಲ್‌ ಮೀಡಿಯಾ ಚಾಟ್‌ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಸೀಮವಾರ ಸಂಜೆ ಶವ ಪತ್ತೆಯಾಗಿದ್ದು, ಬಿಎನ್‌ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page