ಕರೇಸಿದ್ದೇಶ್ವರ ದೇವಸ್ಥಾನದ ಹೆಮ್ಮೆಯ ಧ್ರುವ ಇನ್ನಿಲ್ಲ! ಪ್ರೀತಿಯ ಆನೆಯ ನಿಧನಕ್ಕೆ ಗ್ರಾಮವೇ ಕಂಬನಿ!!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದ ಶ್ರೀ ಕರೇಸಿದ್ದೇಶ್ವರ ದೇವಸ್ಥಾನದ ಹೆಮ್ಮೆಯಾಗಿದ್ದ 32 ವರ್ಷ ವಯಸ್ಸಿನ ಧ್ರುವ ಹೆಸರಿನ ಗಂಡಾನೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದೆ ಎಂದು ತಿಳಿದು ಬಂದಿದೆ.

Advertisement

ಕಳೆದ 20 ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಧ್ರುವ ಆನೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ನ.13) ಕೊನೆಯುಸಿರೆಳೆದಿದೆ. ಧ್ರುವನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಲಖನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ಛಾಯೆ ಆವರಿಸಿದೆ. ಅಲಖನೂರು ಗ್ರಾಮದ ಶ್ರೀ ಕರೇಸಿದ್ದೇಶ್ವರ ದೇವಸ್ಥಾನದ ಧ್ರುವ ಆನೆ ಎಂದರೆ ಕೇವಲ ದೇವಸ್ಥಾನದ ಪ್ರಾಣಿ ಮಾತ್ರವಾಗಿರಲಿಲ್ಲ. ಅದು ಇಡೀ ಗ್ರಾಮದ ಹೆಮ್ಮೆ, ಗೌರವ ಹಾಗೂ ಭಾವನಾತ್ಮಕ ಸಂಬಂಧದ ಪ್ರತೀಕವಾಗಿತ್ತು. ತನ್ನ ಬೃಹತ್ ದೇಹ, ಎತ್ತರದ ಮೈಕಟ್ಟು, ವಿಶಾಲವಾದ ಕಿವಿಗಳು, ಉದ್ದನೆಯ ಸೊಂಡಿಲು, ಬಲಿಷ್ಠ ಕಾಲುಗಳು ಹಾಗೂ ರಾಜನಂತೆ ಗಾಂಭೀರ್ಯದಿಂದ ಹೆಜ್ಜೆ ಹಾಕುವ ನಡಿಗೆಯಿಂದ ನೋಡುಗರ ಮನಸ್ಸನ್ನು ಕ್ಷಣಾರ್ಧದಲ್ಲಿ ಸೆಳೆಯುತ್ತಿತ್ತು. ಧ್ರುವ ಆನೆ ನಡೆದು ಕೊಂಡು ಬರುತ್ತಿದ್ದರೆ ರಸ್ತೆಯಲ್ಲಿ ಸಾಗುವ ಜನರು ಕ್ಷಣಕಾಲ ನಿಂತು ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅದರ ಗಂಭೀರ ನಡಿಗೆ, ಶಾಂತ ಸ್ವಭಾವ ಹಾಗೂ ಆಕರ್ಷಕ ರೂಪವೇ ಅದಕ್ಕೆ ವಿಶೇಷ ಮೆರುಗು ನೀಡುತ್ತಿತ್ತು. ಧ್ರುವನನ್ನು ನೋಡಿದ ಮಕ್ಕಳ ಮುಖದಲ್ಲಿ ಸಂತೋಷ ಅರಳುತ್ತಿತ್ತು. ಹಿರಿಯರು ಭಕ್ತಿಭಾವದಿಂದ ಕೈಮುಗಿದು ನಮಸ್ಕರಿಸುತ್ತಿದ್ದರು. ಅಲಖನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು, ಉತ್ಸವಗಳು ಹಾಗೂ ವಿವಿಧ ಸಭೆ-ಸಮಾರಂಭಗಳಲ್ಲಿ ಧ್ರುವ ಆನೆಯ ಉಪಸ್ಥಿತಿಯೇ ವಿಶೇಷ ಆಕರ್ಷಣೆಯಾಗಿತ್ತು ಎಂದು ಜಾಲತಾಣ ಮೂಲಗಳು ಹೇಳಿವೆ.

Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page