ಕಡಬ : ಇಲ್ಲಿನ ಕುಟ್ರುಪ್ಪಾಡಿ ನಿವಾಸಿಯೊಬ್ಬರಿಗೆ ಕೋಡಿಂಬಾಳದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಕುಟ್ರುಪ್ಪಾಡಿ ಗ್ರಾಮದ ಕೆ.ಎಂ. ಮ್ಯಾಥ್ಯ ಎಂಬವರು ಕಡಬದಲ್ಲಿ ವ್ಯಾಪಾರ ನಡೆಸುತ್ತಿದ್ದು, ನ.12 ರಂದು ಬೆಳಿಗ್ಗೆ 11 ಗಂಟೆಗೆ ಕೋಡಿಂಬಾಳದ ಅನೀಸ್ ಎಂಬವರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿ ಕಡಬ ಪೇಟೆಗೆ ಬರಲು ಹೇಳಿದ್ದಾರೆ. ದೂರುದಾರರು ಮಗ ರಕ್ಷಿತ್ ಮಾಣಿ ಜೊತೆ ಕಡಬದ ಗಣೇಶ್ ಮೆಡಿಕಲ್ ಬಳಿ ಬಂದಾಗ KA21 N2192 ಮಾರುತಿ ಸ್ವಿಫ್ಟ್ ಕಾರಿನಲ್ಲಿ ವಿಕ್ಟರ್ ಮಾರ್ಟಿಸ್ ಜೊತೆ ಬಂದ ಆರೋಪಿ ಅನೀಸ್ ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಡಬ ಠಾಣಾ ಅ.ಕ್ರ. 136/2026, ಕಲಂ 126(2), 308(5) r/w 3(5) BNS-2023 ರಂತೆ ಪ್ರಕರಣ ದಾಖಲಾಗಿದೆ.














