ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಆರೋಪ! ಕಡಬ ಠಾಣೆಯಲ್ಲಿ ಪ್ರಕರಣ ದಾಖಲು!!

ಕಡಬ : ಇಲ್ಲಿನ ಕುಟ್ರುಪ್ಪಾಡಿ ನಿವಾಸಿಯೊಬ್ಬರಿಗೆ ಕೋಡಿಂಬಾಳದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ ಎಂದು ತಿಳಿದು ಬಂದಿದೆ.

Advertisement

ಕುಟ್ರುಪ್ಪಾಡಿ ಗ್ರಾಮದ ಕೆ.ಎಂ. ಮ್ಯಾಥ್ಯ ಎಂಬವರು ಕಡಬದಲ್ಲಿ ವ್ಯಾಪಾರ ನಡೆಸುತ್ತಿದ್ದು, ನ.12 ರಂದು ಬೆಳಿಗ್ಗೆ 11 ಗಂಟೆಗೆ ಕೋಡಿಂಬಾಳದ ಅನೀಸ್ ಎಂಬವರು ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿ ಕಡಬ ಪೇಟೆಗೆ ಬರಲು ಹೇಳಿದ್ದಾರೆ. ದೂರುದಾರರು ಮಗ ರಕ್ಷಿತ್ ಮಾಣಿ ಜೊತೆ ಕಡಬದ ಗಣೇಶ್ ಮೆಡಿಕಲ್ ಬಳಿ ಬಂದಾಗ KA21 N2192 ಮಾರುತಿ ಸ್ವಿಫ್ಟ್ ಕಾರಿನಲ್ಲಿ ವಿಕ್ಟರ್ ಮಾರ್ಟಿಸ್ ಜೊತೆ ಬಂದ ಆರೋಪಿ ಅನೀಸ್ ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಈ ಬಗ್ಗೆ ಕಡಬ ಠಾಣಾ ಅ.ಕ್ರ. 136/2026, ಕಲಂ 126(2), 308(5) r/w 3(5) BNS-2023 ರಂತೆ ಪ್ರಕರಣ ದಾಖಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page