ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿಗೆ ಮಕ್ಕಳ ಶಿಕ್ಷಣವೇ ಮಾನದಂಡ! ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಪತ್ರಿಕಾಗೋಷ್ಠಿ!!

ಪುತ್ತೂರು : ಅರ್ಜಿಯೂ ಇಲ್ಲ, ಶಿಫಾರಸ್ಸೂ ಇಲ್ಲದೆ ಕೇವಲ ಮಕ್ಕಳ ಶಿಕ್ಷಣವನ್ನೇ ಮಾನದಂಡವಾಗಿ ಕರ್ನಾಟಕ ರಾಜ್ಯ ಎಸ್‌.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆಯಿಂದ ನೀಡುವ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ಮೋಯ್ದಿನ್ ಕುಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

Advertisement

ಮಕ್ಕಳ ಹಕ್ಕುಗಳ ರಕ್ಷಣೆ, ಗುಣಮಟ್ಟದ ಶಿಕ್ಷಣದ ಖಾತರಿ ಹಾಗು ಸರಕಾರಿ ಶಾಲೆಗಳ ಉಳಿವು ಮತ್ತು ಬೆಳವಣಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯಿಂದ 2026-27ನೇ ಶೈಕ್ಷಣಿಕ ಸಾಲಿನ ಎರಡನೇ ವರ್ಷದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ 20 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ನ.15ರಂದು ಮುಕೈ ಆರ್.ಜೆ.ಎಮ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಕೆ ಸಹಿತ ಹಲವಾರು ಮಂದಿ ಗಣ್ಯರು ಮತ್ತು ವೇದಿಕೆಯ ರಾಜ್ಯ ಮತ್ತು ಜಿಲ್ಲಾ ನಿರ್ದೇಶಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

Advertisement

ವೇಣೂರಿನ ಪ್ರೌಢಶಾಲೆ ಶಿಕ್ಷಕ ವೆಂಕಟೇಶ ಎಸ್ ತುಳಪುಲೆ, ಬೆಳ್ತಂಗಡಿಯ ಕಾಶಿಪಟ್ಟ ಶಾಲೆಯ ವಸುಧಾ ಪಿ, ಬಲ್ಮಠ ಶಾಲೆಯ ಕವಿತಾ ಕೆ, ಮಂಳೂರು ಮಿಜಾರು ಶಾಲೆಯ ಭವ್ಯಾ ಎಚ್ ಜಿ, ಗೋಳ್ತಮಜಲು ಶಾಲೆಯ ನಿರಂಜನ್ ಡಿ, ಪುತ್ತೂರು ಸುದಾನ ವಸತಿಯುತ ಶಾಲೆಯ ಸದಾಶಿವ ಶಿವಗಿರಿ ಕಲ್ಲಡ್ಕ, ಸುಳ್ಯ ಮುರಳ್ಯ ಶಾಲೆಯ ನಳಿನಾಕ್ಷಿ ಬಿ, ಸುಳ್ಯ ಮುಗೇರು ಶಾಲೆಯ ಶುಭ ಪಿ.ಜಿ, ಮೂಡಬಿದ್ರಿ ಅಳಿಯೂರು ಶಾಲೆಯ ವಿನುತ ಎಸ್, ಚೆನ್ನೆತೋಡಿ ಶಾಲೆಯ ಭರತ್ ಕುಮಾರ್, ವರ್ಣಬೆಟ್ಟು ಶಾಲೆಯ ಮೇಬಲ್ ನೋರಾ ಡಿಸೋಜಾ, ನರಿಮೊಗರು ಶಾಲೆಯ ಶ್ರೀಲತಾ ರಾಜೇಶ್ ರೈ, ಬಂಟ್ವಾಳ ಕೇಪು ಶಾಲೆಯ ಸುಜಾತಾ ಯಂ.ಕೆ, ಬೆಳ್ತಂಗಡಿ ಮಚ್ಚಿನ ಶಾಲೆಯ ಸುನೀತಾ ಬಿ, ಕೈಕಾರ ಶಾಲೆಯ ಜಯಶ್ರೀ ಕೆ, ಉಳ್ಳಾಲ ಶಾಲೆಯ ಶಿಲ್ಪ ಕೆ.ಟಿ, ಸವಣೂರು ಮೊಗರು ಶಾಲೆಯ ದಯಾಮಣಿ ಕೆ, ಪಂಚಿಮೊಗರು ಶಾಲೆಯ ವನಿತಾ, ತುವೈಲು ಶಾಲೆಯ ಅಕ್ಷತಾ ಮತ್ತು ವಿಶೇಷವಾಗಿ ನಿವೃತರಾದರೂ ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸುಳ್ಯದ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಅತ್ಪಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೊಯ್ಲಿನ್ ಕುಟ್ಟಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಕೋಶಾಧಿಕಾರಿ ಉಸ್ಮಾನ್ ನೆಕ್ಕಿಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page