ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅಶ್ವಿನಿ ವೈಷ್ಣವ್‌! ಕ್ಯಾ. ಬ್ರಿಜೇಶ್‌ ಚೌಟ ಸಹಿತ ಹಲವರು ಸಾಥ್‌!!

ಪುತ್ತೂರು : ಪಶ್ವಿಮ ಘಟ್ಟಗಳ ಪರ್ವತಗಳ ಸಾಲಿನ ನಡುವೆ ಇಂದಿನಿಂದ ದೇಶದ ಅತ್ಯಂತ ವೇಗದ ವಂದೇ ಭಾರತ್ ರೈಲು ಸಂಚರಿಸಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಮೂಲಕ ಈ ರೈಲು ಮಡಗಾಂವ್ ಸಂಪರ್ಕ ಕಲ್ಪಿಸಲಿದೆ. ನಿಸರ್ಗದ ಮಧ್ಯೆ ಸಂಚರಿಸುವ ಈ ರೈಲು ಕರಾವಳಿಗೆ ಬಂದಿರೋದು ಕರಾವಳಿಗರ ಖುಷಿಯನ್ನು ಇಮ್ಮಡಿಗೊಳಿಸಿದೆ.

Advertisement

ಬಾನೆತ್ತರಕ್ಕೆ ಚಾಚಿರುವ ಪಶ್ಚಿಮ ಘಟ್ಟಗಳ ನಡುವೆ ದೇಶದ ಅತೀ ವೇಗದ ರೈಲು ಹಾದುಹೋಗುವ ದಿನ ಬಂದಾಗಿದೆ. ಬೆಂಗಳೂರು-ಮಂಗಳೂರು-ಮಡಂಗಾವ್ ಮಧ್ಯೆ ಸಂಚರಿಸುವ ಈ ರೈಲು ಸುಮಾರು 50 ಕಿಲೋಮೀಟರ್ ದೂರದ ಪಶ್ಚಿಮ ಘಟ್ಟಗಳ ಬೆಟ್ಟಗಳ ಸಾಲುಗಳ ನಡುವೆ ತನ್ನ ಪ್ರಯಾಣವನ್ನು ಬೆಳೆಸಲಿದೆ. ಕರಾವಳಿ ಭಾಗದ ಜನರ ಅತ್ಯಂತ ಬೇಡಿಕೆಯ, ನಿರೀಕ್ಷೆಯ ರೈಲಿಗೆ ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆ ಸ್ಪಂದಿಸಿದ ಹಿನ್ಮಲೆಯಲ್ಲಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ಮಂಗಳೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ ಅದೇ ಉದ್ಘಾಟನಾ ಪ್ರಯಾಣವನ್ನು ಆರಂಭಿಸಿದೆ. ಅದರಲ್ಲೂ ಈ ರೈಲು ಶಿರಾಡಿಘಾಟ್ ನಂತಹ ಅತ್ಯಂತ ಕಠಿಣ ಮಾರ್ಗದಲ್ಲಿ ಓಡಾಟ ಆರಂಭಿಸಿದ್ದು, ಪ್ರಕೃತಿಯ ರಸದೌತಣವನ್ನು ಪ್ರಯಾಣಿಕರಿಗೆ ಈ ರೈಲು ನೀಡುವುದರಲ್ಲಿ ಯಾವುದೇ ಸಂಶಯಗಳೂ ಇಲ್ಲ. ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರವನ್ನು ಆರಂಭಿಸಬೇಕು ಎನ್ನುವ ಬೇಡಿಕೆಯನ್ನಿಟ್ಟು,ಕರಾವಳಿ ಭಾಗದ ಜನ ನಡೆಸಿದ್ದ ಹೋರಾಟದ ಫಲವಾಗಿ ಮಂಗಳೂರು-ಬೆಂಗಳೂರು ನಡುವೆ 2007 ರೈಲು ಸೇವೆ ಆರಂಭಗೊಂಡಿತ್ತು. ಮೊದಲಿಗೆ ಸರಕು ರೈಲುಗಳ ಸೇವೆ ಆರಂಭಗೊಂಡ ಬಳಿಕದ ದಿನಗಳಲ್ಲಿ ಪ್ರಯಾಣಿಕ ರೈಲು ಈ ರಸ್ತೆಯಲ್ಲಿ ಆರಂಭಗೊಂಡಿತ್ತು. ರಾತ್ರಿ ವೇಳೆಯಲ್ಲಿ ಸಾಗುತ್ತಿದ್ದು ಈ ರೈಲಿನ ಜೊತೆಗೆ ಹಗಲು ವೇಳೆಯಲ್ಲೂ ಸಂಚರಿಸುವ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ. ಯಾವಾಗ ದೇಶದಲ್ಲಿ ವಂದೇ ಭಾರತ್ ರೈಲಿನ ಹವಾ ಆರಂಭಗೊಂಡಿತೋ, ಅಂದಿನಿಂದ ಈ ರೈಲು ಹಳಿಯಲ್ಲೂ ವಂದೇ ಭಾರತ್ ಸಂಚರಿಸಬೇಕು ಎನ್ನುವ ಕನಸು ಇಂದಿಗೆ ನನಸಾಗಿದೆ. ಕೇಂದ್ರ ಮತ್ತು ರೈಲು ಇಲಾಖೆಗೆ ಕರಾವಳಿ ಭಾಗದ ಜನ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Advertisement

ವಂದ್ ಭಾರತ್ ರೈಲು ಸೇವೆ ಆರಂಭಗೊಂಡ ಹಿನ್ನಲೆಯಲ್ಲಿ ಕರಾವಳಿಯ ಜನ ಈ ದಿನವನ್ನು ಒಂದು ಅಘೋಷಿತ ಹಬ್ಬದ ರೀತಿಯಲ್ಲಿ ಆರಂಭಿಸಿದ್ದಾರೆ.‌ ರೈಲು ನಿಲ್ದಾಣದಲ್ಲಿ ಸೇರಿ ವಂದೇ ಭಾರತ್ ಆಗಮನವನ್ನು ವೀಕ್ಷಿಸಲು ಗಂಟೆಗಟ್ಟಲೆ ಕಾದಿದ್ದಾರೆ. ಉರಿ ಬಿಸಿಲಿನಲ್ಲೂ ರೈಲಿಗಾಗಿ ಕಾದು ಕುಳಿತಿದ್ದ ಜನರಲ್ಲಿ ಏನೋ ಜಯಿಸಿದ ಉಲ್ಲಾಸ ಕಂಡು ಬಂದಿದ್ದು, ರೈಲು ನಿಲ್ದಾಣ ಕುತೂಹಲಿಗರಿಂದ ತುಂಬಿ ತುಳುಕಿತ್ತು.

ವಂದೇ ಭಾರತ್ ಕರಾವಳಿಯ ಹಳಿಗಳಲ್ಲಿ ಓಡಾಟ ಆರಂಬಿಸಿರುವುದು ಕರಾವಳಿ ಭಾಗದ ಜ‌ನರ ಖುಷಿಯನ್ನು ಇಮ್ಮಡಿಗೊಳಿದ್ದು, ಇನ್ನಷ್ಟು ರೈಲುಗಳು ಇಲ್ಲಿಗೆ ಬರಬೇಕಿದೆ ಎನ್ನುವ ಬೇಡಿಕೆಯನ್ನೂ ರೈಲು ಇಲಾಖೆಯ ಮುಂದಿಟ್ಟಿದ್ದಾರೆ. ಬಳಿಕ ಅದೇ ರೈಲಿನಲ್ಲಿ ಸುಬ್ರಹ್ಮಣ್ಯ ಸಂಪರ್ಕಿಸುವ ನೆಟ್ಟಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಕೋಷ್ಠದ ಸಹಸಂಚಾಲಕ ಪ್ರಸನ್ನ ದರ್ಬೆ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ್,ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾ‌ರ್ ಪಿ.ಬಿ., ಡಾ. ಎಂ.ಕೆ. ಪ್ರಸಾದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಬಿಜೆಪಿ ಗ್ರಾಮಾಂತರ ಮಂಡಲ ಜಿಲ್ಲಾ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಬಿಜೆಪಿ ನಗರದ ಮುಖಂಡರಾದ ಶಶಿಧರ್ ನಾಯಕ್, ನಿರಂಜನ್ ಮಾನ್ಯ, ನಾಗೇಂದ್ರ ಬಾಳಿಗ, ಪುತ್ತೂರಿನ ವರ್ತಕ ಸಂಘ ಸೇರಿದಂತೆ ಹಲವರು ಸಾರ್ವಜನಿಕರು ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page