ಮನವಳಿಕೆಗುತ್ತುವಿನ ಕಂಬಳಗದ್ದೆಯಲ್ಲಿ ಬಂಟೆರೆ ಕೆಸರ್ ಡೊಂಜಿ ಕುಸಲ್

ಆಲಂಕಾರು: ಮಂಗಳೂರಿನ ಬಂಟರಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿ, ಪುತ್ತೂರು ತಾಲೂಕು ಬಂಟರ ಸಂಘ ಮತ್ತು ನೆಲ್ಯಾಡಿ ವಲಯ ಬಂಟರ ಸಂಘ ಹಾಗೂ ಆಲಂಕಾರು ವಲಯ ಬಂಟರ ಸಂಘದ ಸಂಯುಕ್ತ ಆಶ್ರಯದಲ್ಲಿ ಸೆ.20 ರಂದು ಪೆರಾಬೆ ಗ್ರಾಮದ ಮನವಳಿಕೆಗುತ್ತುವಿನ ಕಂಬಳಗದ್ದೆಯಲ್ಲಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮನವಳಿಕೆಯ ಕಂಬಳ ಗದ್ದೆಯ ಮುಂಭಾಗದಲ್ಲಿರುವ ಮನವಳಿಕೆ ಗುತ್ತು ಸಭಾಭವನದಲ್ಲಿ ನಡೆಯಿತು.

ಪುತ್ತೂರ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಮನವಳಿಕೆಗುತ್ತು ಕಂಬಳಗದ್ದೆಯಲ್ಲಿ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತೋಷ ತಂದಿದೆ. ದೈವ ದೇವರ ಪ್ರೇರಣೆಯಂತೆ ಸಣ್ಣ ಮಟ್ಟದಲ್ಲಿ ಆಯೋಜನೆಯಾದ ಈ ಕಾರ್ಯಕ್ರಮ ಇದೀಗ ದೊಡ್ಡಮಟ್ಟದಲ್ಲಿ ಆಯೋಜನೆಗೊಂಡಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಬಂಟ ಬಾಂಧವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು. ಜೊತೆಗೆ, ಪುತ್ತೂರು ತಾಲ್ಲೂಕು ಬಂಟರ ಸಂಘದ ವತಿಯಿಂದ ಕಾರ್ಯಕ್ರಮಕ್ಕೆ 50,000 ಧನ ಸಹಾಯ ನೀಡುವುದಾಗಿ ತಿಳಿಸಿದರು.

Advertisement

ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಮತ್ತು ಕಾರ್ಯಕ್ರಮದ ಗೌರವಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದಲ್ಲಿ ಎಲ್ಲಾ ವಲಯದ ಬಂಟ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ. ಮೊನ್ನೆಯಿಂದ ನಮ್ಮ ಭಾಗದ ಯುವಕರು ಕೆಸರ್ ಡೊಂಜಿ ಕಾರ್ಯಕ್ರಮದ ಯಶಸ್ವಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದು, ಆಮಂತ್ರಣ ಪತ್ರಿಕೆಯನ್ನು ದೊಡ್ಡ ಮಟ್ಟದಲ್ಲಿ ಪಸರಿಸುವಂತೆ ತಿಳಿಸಿದರು.

ಕ್ರೀಡಾಕೂಟದ ತೀರ್ಪುಗಾರ ದಯಾನಂದ ರೈ ಕೋರ್ಮಂಡ ಕೆಸರ್ದ ಗೊಬ್ಬುದ ಬಗ್ಗೆ ಮಾಹಿತಿ ಹಾಗೂ ಅದರ ರೂಪುರೇಷೆಯ ಬಗ್ಗೆ ತಿಳಿಸಿದರು. ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ ಸಭೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಉಪಾಧ್ಯಕ್ಷರಾದ ಸುಭಾಸ್ ಕುಮಾರ್ ಶೆಟ್ಟಿ ಆರುವಾರ, ಆಲಂಕಾರು ವಲಯ ಬಂಟರ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ರೈ ಇರಿಂಟಾಡಿ,ರಾಧಾಕೃಷ್ಣ ರೈ ಪರಾರಿಗುತ್ತು, ಕೋಶಾಧಿಕಾರಿ ಮಮತಾ ಕಮಲಾಕ್ಷ ಶೆಟ್ಟಿ ಅಂಬರಾಜಿ, ಸಂಘಟನಾ ಕಾರ್ಯದರ್ಶಿ ಮೋಹನದಾಸ ಶೆಟ್ಟಿ ಬಡಿಲ,ಬಂಟೆರೆ ಕೆಸರ್ ಡೊಂಜಿ ಕಾರ್ಯಕ್ರಮದ ಸಂಚಾಲಕರಾದ ಮೋಹನದಾಸ ರೈ ಪರಾರಿಗುತ್ತು ಸೇರಿದಂತೆ ಪುತ್ತೂರು ತಾಲೂಕು ಬಂಟರ, ಆಲಂಕಾರು, ನೆಲ್ಯಾಡಿ ವಲಯ ಬಂಟರ ಸಂಘದ ಪದಾಧಿಕಾರಿಗಳು, ನಿರ್ದೆಶಕರು, ಸದಸ್ಯರು ಉಪಸ್ಥಿತರಿದ್ದರು.

ನಿರ್ದೇಶಕಿ ಸುಜಾತ ಜಯರಾಮ ಶೆಟ್ಟಿ ಪ್ರಾರ್ಥಿಸಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಕಾರ್ಯದರ್ಶಿ ಅಜಿತ್ ರೈ ಮನವಳಿಕೆ ಧನ್ಯವಾದ ಸಮರ್ಪಿಸಿದರು. ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಲೋಕನಾಥ ರೈ ಕೇಲ್ಕ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page