ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ದಿನೇಶ್ ಜೈನ್ ಅವರನ್ನು ಚುನಾವಣೆಗೆ ನಿಲ್ಲಿಸಲು ಅಶೋಕ್ ರೈ ಪ್ಲಾನ್ ಮಾಡಿದ್ದರು ಎಂಬ ಸ್ಪೋಟಕ ವಿಚಾರವನ್ನು ಹೇಳಿದ್ದಾರೆ.ದಿನೇಶ್ ಜೈನ್ ಹಂಚಿಕೊಂಡ ಮಾತುಗಳು ಹೀಗಿವೆ..ಅಶೋಕ್ ರೈವರೆ ಸ್ವಲ್ಪ ಬುದ್ದಿಯಿಂದ ಮಾತನಾಡಿ. ಬುದ್ದಿಯನ್ನು ಕೈಯಲ್ಲಿ ಇಟ್ಟುಕೊಂಡು ಮಾತಡಬೇಡಿ. ನೀವು ಪುತ್ತೂರಿನ ಜನ ಪ್ರತಿನಿಧಿ .ಇವರು ಯಾರು ಕೇಳಿಕ್ಕೆ ಎನ್ನುವ ನೀವು ಒಮ್ಮೆ ನೆನಪಿಸಿಕೊಳ್ಳಿ ಮೂರು ವರೆ ವರ್ಷಗಳ ಕೆಳಗೆ ಕಾಂಗ್ರೆಸ್ ಗೆ ಹಾರುವ ಮುಂಚೆ ನಿಮಗೆ ಅನೇಕ ವೇದಿಕೆ ಕಲ್ಪಿಸಿದ್ದಾಗ ನಾನು ಅಂದರೆ (ದಿನೇಶ್ ಜೈನ್) ಎಲ್ಲಾರು ನಿಮ್ಮನ್ನು ಉಪಯೋಗ ಮಾಡಿ ಡೋನೇಶನ್ ತೆಗೆದುಕೊಂಡು ಹೋಗುತ್ತಿದ್ದದು. ನಿಮಗೆ ಬಜರಂಗದಳದ ಅನೇಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದು ವೇದಿಕೆ ಕೋಡುವ ಇವರು ಯಾರು ಎಂದು ಗೋತ್ತಾಗಿಲ್ಲವಾ? 2023 ರ ಚುನಾವಣೆ ಸಂದರ್ಭದಲ್ಲಿ ನೀವು ಕಾಂಗ್ರೇಸ್ ಪಕ್ಷದ ಸೀಟ್ ಸಿಗುವ ಎರಡು ದಿನದ ಹಿಂದೆ ಆ ದಿನ ಶನಿವಾರ ಅಗಿತ್ತು . ನನ್ನನು ಬಿಜೆಪಿ ವಿರುದ್ದ ಭಂಡಾಯ ಅಭ್ಯರ್ಥಿ ಅಗಿ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿ ಮಧ್ಯ ರಾತ್ರಿ ನನಗೆ ಪೋನ್ ಮಾಡಿ ಮಾತಾಡಲು ಕರೆದಾಗ ಗೊತ್ತಾಗಿಲ್ಲ ಇವರು ಯಾರು ಎಂದು . ಈಗ ಕೇಳ್ತರಿ ಇದನ್ನೆಲ್ಲ ಕೇಳಿಕ್ಕೆ ಇವರು ಯಾರು ಎಂದು.. ಗೊತ್ತಿರಲಿ ನಿಮಗೂ ನನಗೂ ವ್ಯತ್ಯಾಸ ಏನು ಅಂದರೆ ಅಹಂಕಾರದ ಮದ ಹಣದ ಅಧಿಕಾರದ ಮದ ಧರ್ಫ ಮಾತಡಿಸುತ್ತಿದೆ .ಇದಕ್ಕೆ ಶ್ರೀ ಮಹಾಲಿಂಗೇಶ್ವರ ಮತ್ತು ಮಹಿಷಮರ್ಧಿನಿ ಉತ್ತರ ಸದ್ಯದಲ್ಲೆ ಕೊಡುತ್ತಾರೆ ನೋಡಿ.













