ಭಾರತೀಯ ವಾಯುಪಡೆ ನೂತನ ಮುಖ್ಯಸ್ಥರಾಗಿ ಏರ್‌ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್! ಯುದ್ಧವಿಮಾನ ಹಾರಾಟದಲ್ಲಿ 3,500ಕ್ಕೂ ಹೆಚ್ಚು ಗಂಟೆಗಳ ಅನುಭವ!!

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಸುಮಾರು 43 ವರ್ಷಗಳ ಸುದೀರ್ಘ ಸೇವೆಯ ಬಳಿಕ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರಿಂದ ಅವರು ಜವಾಬ್ದಾರಿ ಸ್ವೀಕರಿಸಿದರು. ಯುದ್ಧವಿಮಾನ ಹಾರಾಟದಲ್ಲಿ 3,500ಕ್ಕೂ ಹೆಚ್ಚು ಗಂಟೆಗಳ ಅನುಭವ ಹೊಂದಿರುವ ದೀಕ್ಷಿತ್, ವಾಯುಪಡೆಯ ಮುಂದಿನ ಕಾರ್ಯತಂತ್ರಕ್ಕೆ ನಾಯಕತ್ವ ನೀಡಲಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

ಅಧಿಕಾರ ಹಸ್ತಾಂತರಕ್ಕೂ ಮುನ್ನ ರೇಸ್ ಕೋರ್ಸ್ ವಾಯುನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರಿಗೆ ವಾಯುಪಡೆಯ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ದೀಕ್ಷಿತ್ ಅವರಿಗೆ ಮುಖ್ಯಸ್ಥರ ಜವಾಬ್ದಾರಿ ಹಸ್ತಾಂತರಿಸಲಾಯಿತು. ಇದಕ್ಕೂ ಮೊದಲು ಅವರು ವಾಯುಪಡೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 1966ರ ಡಿಸೆಂಬರ್ 9ರಂದು ಜನಿಸಿದ ದೀಕ್ಷಿತ್, 1986ರ ಡಿಸೆಂಬರ್ 6ರಂದು ವಾಯುಪಡೆಯ ಫೈಟರ್ ವಿಭಾಗಕ್ಕೆ ಸೇರ್ಪಡೆಯಾಗಿದ್ದರು. ತಮ್ಮ ಸುಮಾರು ನಾಲ್ಕು ದಶಕಗಳ ಸೇವೆಯಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಹಾಗೂ ತರಬೇತಿ ವಿಭಾಗಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page