ಪುತ್ತೂರು : ಮಜ್ಜಾರಡ್ಕ ಶ್ರೀ ವಿಷ್ಣು ಯುವ ಬಳಗದ ವತಿಯಿಂದ ನವೆಂಬರ್ 1ರಂದು ನಡೆದ ಕೆಸರಡೊಂಜಿ ದಿನ ಕಾರ್ಯಕ್ರಮದ ಸಮಾರಂಭದಲ್ಲಿ ಕಾವು ನವೋದಯ ಒಕ್ಕೂಟಕ್ಕೆ ಪ್ರತಿಷ್ಠಿತ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗ್ರಾಮದ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಒಕ್ಕೂಟವು ನಡೆಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.
ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷ ಸುಬ್ರಾಯ ಗೌಡ, ಕಾರ್ಯದರ್ಶಿ ರೇವತಿ ಸಿ.ಎನ್, ಅಮ್ಮುಪೂಂಜ ಪಳನೀರು, ನಿಕಟಪೂರ್ವ ಪದಾಧಿಕಾರಿಗಳಾದ ನಿರ್ಮಲಾ ರೈ ಮದ್ಲ, ಪ್ರೇರಕರಾದ ಗಾಯತ್ರಿ, ಸುಮತಿ ಆಚಾರಿಮೂಲೆ, ಕೇಶವ ಸಸ್ಪೆಟ್ಟಿ, ಇಬ್ರಾಹಿಂ ಆಶ್ವತ್ತಡಿ ಹಾಗೂ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಆಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪ್ರದಾನವು ಒಕ್ಕೂಟದ ಸಮಾಜಮುಖಿ ಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.













