ಪುತ್ತೂರು ಮಹಿಳಾ ಠಾಣೆಗೆ ಇಂದು ಬೆಳಿಗ್ಗೆ 11.30 ಸುಮಾರಿಗೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅಗಮಿಸಿದ್ದರು ಎಂದು ತಿಳಿದು ಬಂದಿದೆ. ತನ್ನ ಹಳೆಯ ಕೇಸ್ ಒಂದರ ಸಂಬಂಧ ಆಗಮಿಸಿದ್ದರೆಂದು ಮೂಲಗಳು ತಿಳಿಸಿವೆ.
ಮಹಿಳಾ ಠಾಣಾ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರದ ಕಾರಣ ಲಿಖಿತವಾಗಿ ಹಾಜರದ ಬಗ್ಗೆ ನೋಟಿಸ್ ನೀಡಲಾಯಿತು. ಮುಂದೆ ಸೂಚಿಸಿದ ದಿನಾಂಕದಂದು ಮತ್ತೆ ಠಾಣೆಗೆ ತಿಮರೋಡಿ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸಹಿತ ಹಲವರು ಜೊತೆಗಿದ್ದರು.
ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ತನ್ನ ಹೋರಟಕ್ಕೆ ಜಯ ಸಿಗುವಂತೆ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.














