ಮಂಗಳೂರಿನ ಟೀಮ್ ಸತ್ಯಜಿತ್ ಸುರತ್ಕಲ್ ಅವರ ವತಿಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆ, ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ, ಸಮುದಾಯ ದಂತ ವಿಭಾಗ ಯೆನೆಪೋಯ ಕಾಲೇಜು ಮತ್ತು ಆಸ್ಪತ್ರೆ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ತಿರಂಗ ಟ್ರಸ್ಟ್ ಅವರ ಸಹಕಾರದೊಂದಿಗೆ ರಕ್ತದಾನ ಶೀಬಿರ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸೆ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಒಕ್ಟೋಬರ್ 04 ಭಾನುವಾರದಂದು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕಂಕನಾಡಿ ಗರೋಡಿ ಬಳಿಯ ಸರ್ವಮಂಗಳ ಹಾಲ್‌ನಲ್ಲಿ ನಡೆಯಲಿದೆ.

ಉಚಿತ ವೈದ್ಯಕೀಯ ತಪಾಸಣಾ ವಿಭಾಗಗಳು, ದಂತ ಚಿಕಿತ್ಸಾ ಶಿಬಿರದ ಉಚಿತ ಸೇವೆಗಳು, ಉಚಿತ ಕನ್ನಡಕ ವಿತರಣೆ, ಹಸಿರಿ ಕಾರ್ಡ್ ವಿಶೇಷ ರಿಯಾಯಿತಿ ಸೌಲಭ್ಯ ಈ ಶಿಬಿರದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.













