ಸ್ಟಿಂಗ್ ತನಿಖೆ ಯಾಕಿಷ್ಟು ನಿಧಾನವಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಿಸಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ವಿರುದ್ಧ ನಡೆದಿದೆ ಎನ್ನಲಾದ ನಕಲಿ ಸ್ಟಿಂಗ್ ಕಾರ್ಯಾಚರಣೆಯ ತನಿಖೆ ತೃಪ್ತಿಕರವಾಗಿ ಸಾಗದ ಹಿನ್ನಲೆಯಲ್ಲಿ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಎಫ್ಐಆರ್ ದಾಖಲಾದ ದಿನದಿಂದಲೂ ಸಿದ್ದರಾಮಯ್ಯ ಅವರು ತನಿಖೆಯ ಪ್ರತೀ ಮಾಹಿತಿಯನ್ನು ಪಡೆಯುತ್ತಿದ್ದಾರೆ. ನಿನ್ನೆ ಕೂಡ ಪ್ರಕರಣದ ಪ್ರಗತಿ ವರದಿ ನೀಡುವಂತೆ ಸಿಸಿಬಿ ಅಧಿಕಾರಿಗಳ ತಂಡವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಏನು ತನಿಖೆ ಮಾಡ್ತಿದ್ದೀರಿ? ಬೆಳಗ್ಗೆ ಒಬ್ಬರನ್ನು ಅರೆಸ್ಟ್ ಮಾಡ್ತೀರಿ, ಸಂಜೆ ಜಾಮೀನು ತಗೊಂಡು ಮನೆಗೆ ಹೋಗ್ತಾರೆ. ಇದ್ಯಾವ ರೀತಿ ತನಿಖೆ ಎಂದು ಗರಂ ಆಗಿದ್ದಾರೆ. ಪ್ರಕರಣ ದಾಖಲಾಗಿ ಇಷ್ಟೊಂದು ದಿನಗಳಾದರೂ ಇದರ ಹಿಂದಿರುವ ಕಿಂಗ್ ಪಿನ್ ಯಾರು ಅನ್ನೋದನ್ನು ಹುಡುಕಿ ಅರೆಸ್ಟ್ ಮಾಡಿಲ್ಲ. ಏನು ಮಾಡ್ತಿದ್ದೀರಾ? ಸರಿಯಾಗಿ ತನಿಖೆ ಮಾಡಿ. ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.















