ಶ್ವಾನಗಳಿಗೆ ಕುಕುರ್‌ ತಿಹಾರ್‌! ನಾಯಿಗಳಿಗೆ ಚೆಂಡುಹೂವಿನ ಮಾಲೆ ಹಾಕಿ ವಿಶೇಷ ಪೂಜೆ!!

ನೇಪಾಳದಲ್ಲಿ ʼತಿಹಾರ್‌ʼ ಹಬ್ಬದ ಎರಡನೇ ದಿನವನ್ನು ʼಕುಕುರ್‌ ತಿಹಾರ್‌ʼ ಎಂದು ಆಚರಿಸಲಾಗುತ್ತದೆ. ಈ ದಿನ ನಾಯಿಗಳನ್ನು ದೇವರಂತೆ ಪೂಜಿಸಿ, ಮಾಲೆ ಹಾಕಿ, ತಿಲಕವಿಟ್ಟು, ವಿಶೇಷ ಭೋಜನ ನೀಡಲಾಗುತ್ತದೆ. ನಾಯಿಗಳ ನಿಷ್ಠೆ ಸ್ನೇಹವನ್ನು ಗೌರವಿಸುವ ಈ ಹಬ್ಬಕ್ಕೆ ಮಹಾಭಾರತದ ಪೌರಾಣಿಕ ಹಿನ್ನಲೆಯಿದೆ. ಯಮರಾಜನ ದೂತ ಹಾಗೂ ಧರ್ಮದ ಪ್ರತೀಕವಾಗಿ ನಾಯಿಗಳನ್ನು ಕಾಣುವ ಈ ವಿಶಿಷ್ಟ ಆಚರಣೆಯು ಜಾಗತಿಕವಾಗಿ ಪ್ರಾಣಿ ದಯೆಗೆ ಸ್ಪೂರ್ತಿಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.

Advertisement

ನೇಪಾಳದಲ್ಲಿ ನಾಯಿಗಳಿಗಾಗಿಯೇ ವಿಶೇಷ ದಿನವನ್ನು ಮೀಸಲಿಟ್ಟು, ದೇವರಂತೆ ಪೂಜಿಸಲಾಗುತ್ತದೆ. ನೇಪಾಳ ಪ್ರವಾಸೋದ್ಯಮ ಮಂಡಳಿ ಮತ್ತು ಪ್ರಮುಖ ವರದಿಗಳ ಪ್ರಕಾರ, ನೇಪಾಳದ ಐದು ದಿನಗಳ ದೀಪಾವಳಿ ಹಬ್ಬವಾದ ‘ತಿಹಾರ್’ ಆಚರಣೆಯ ಎರಡನೇ ದಿನವನ್ನು ‘ಕುಕುರ್ ತಿಹಾರ್’ ಎಂದು ಆಚರಿಸಲಾಗುತ್ತದೆ. ಈ ದಿನ ಸಾಕುನಾಯಿಗಳು, ಬೀದಿ ನಾಯಿಗಳು ಹಾಗೂ ಪೊಲೀಸ್ ನಾಯಿಗಳಿಗೆ ಚೆಂಡುಹೂವಿನ ಮಾಲೆ ಹಾಕಿ, ಹಣೆಗೆ ಕೆಂಪು ತಿಲಕವನ್ನಿಟ್ಟು, ಅವುಗಳಿಗೆ ಇಷ್ಟವಾದ ಭೋಜನ ನೀಡಲಾಗುತ್ತದೆ. 2026 ರಲ್ಲಿ ನೇಪಾಳಿ ಪಂಚಾಂಗದ ಪ್ರಕಾರ ನವೆಂಬರ್ 8 ರಂದು (ಕೆಲವು ಪಂಚಾಂಗಗಳಲ್ಲಿ ನವೆಂಬರ್ 7) ಲಕ್ಷ್ಮಿ ಪೂಜೆಯ ದಿನವೇ ಈ ಅಪರೂಪದ ಹಬ್ಬ ಬಂದಿದೆ.

Advertisement
Advertisement

ನೇಪಾಳದಲ್ಲಿ ದೀಪಾವಳಿಯನ್ನು ʼತಿಹಾರ್‌ʼ ಎಂದು ಕರೆಯಲಾಗುತ್ತದೆ. ಮೊದಲ ದಿನ ಕಾಗೆಗಳನ್ನು ಎರಡನೇ ದಿನ ನಾಯಿಗಳನ್ನು (ಕುಕುರ್‌ ತಿಹಾರ್‌), ಮತ್ತು ಮೂರನೇ ದಿನ ಹಸುಗಳನ್ನು ಪೂಜಿಸಲಾಗುತ್ತದೆ. ಉಳಿದ ದಿನಗಳಲ್ಲಿ ಲಕ್ಷ್ಮೀ ಪೂಜೆ ಹಾಗೂ ಅಣ್ಣ-ತಂಗಿಯರ ಬಾಂಧವ್ಯದ ಹಬ್ಬ ʼಭಾಯಿ ಟಿಕಾʼ ಆಚರಿಸಲಾಗುತ್ತದೆ. ಮಾನವ ಮತ್ತಯ ನಾಯಿಗಳ ನಡುವಿನ ನಿಷ್ಠೆ ಹಾಗೂ ಸ್ನೇಹವನ್ನು ಗೌರವಿಸಲು ಕುಕ್ಕರ್‌ ತಿಹಾರ್‌ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಈ ದಿನ ಕೇವಲ ಮನೆಯಲ್ಲಿ ಸಾಕುವ ನಾಯಿಗಳು ಮಾತ್ರವಲ್ಲದೆ, ಬೀದಿಬದಿಯ ನಾಯಿಗಳಿಗೂ ಸಮಾನ ಗೌರವ ಸಿಗುತ್ತದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page