ತಮಿಳುನಾಡಿನಲ್ಲಿ 1000 ರೂ. ಗಿಂತ ಹೆಚ್ಚಿನ ಬೆಲೆಯ ಮದ್ಯ ಮಾರಾಟಕ್ಕೆ ಡಿಜಿಟಲ್ ಪಾವತಿಯನ್ನು ಕಡ್ಡಾಯಗೊಳಿಸಲು ತಮಿಳುನಾಡು ಮಾರುಕಟ್ಟೆ ನಿಗಮ ನಿರ್ಧರಿಸಿದೆ. ನ.1 ರಿಂದ ಈ ನಿಯಮ ಜಾರಿಯಾಗಲಿದ್ದು, ರಾಜ್ಯದಲ್ಲಿರುವ 4,048 ಚಿಲ್ಲರೆ ಮದ್ಯದ ಅಂಗಡಿಗಳಿಗೆ ಇದು ಅನ್ವಯಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುಪಿಐ, ಕಾರ್ಡ್ ಪಾವತಿ ಆಯ್ಕೆ ಲಭ್ಯವಿದ್ದರೂ, ಹೆಚ್ಚಿನ ವಹಿವಾಟುಗಳನ್ನು ನಗದು ಮೂಲಕವೇ ನಡೆಯುತ್ತಿವೆ. ದೊಡ್ಡ ಮಟ್ಟದ ನಗದು ನಿರ್ವಹಣೆ ಅಂಗಡಿಯವರಿಗೆ ಕಷ್ಟಕರ.
ಜತೆಗೆ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟವಾಗುವ ದೂರುಗಳೂ ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಈ ನಿಯಮ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.













