ಬೆಳ್ತಂಗಡಿ : ಬಂಟರ ಯಾನೆ ನಾಡವರ ಸಂಘ (ರಿ.) ಬೆಳ್ತಂಗಡಿ, ಬಂಟರ ಯುವ ವಿಭಾಗದ ಸಹಯೋಗದೊಂದಿಗೆ ಬಂಟರ ಮಹಿಳಾ ವಿಭಾಗದ ವತಿಯಿಂದ ನ.14ರಂದು ದೀಪಾವಳಿ ಹಬ್ಬದ ಹಿನ್ನಲೆ ಮೂರನೇ ವರ್ಷದ ಬಂಟರೆ ತುಡರ್ ಪರ್ಬ ಕಾರ್ಯಕ್ರಮವು ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಅ.31 ರಂದು ಬಂಟರ ಮಾತೃ ಸಂಘ ಮಂಗಳೂರು ಇದರ ತಾಲೂಕು ಸಂಚಾಲಕರಾದ ಜಯರಾಮ್ ಭಂಡಾರಿ ಧರ್ಮಸ್ಥಳ ಬಂಟರ ಭವನದಲ್ಲಿ ಬಿಡುಗಡೆ ಮಾಡಿದರು ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಸುಲ್ಕೇರಿ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ರಘುರಾಮ್ ಶೆಟ್ಟಿ ಸಾಧನ, ಪುಷ್ಪರಾಜ್ ಶೆಟ್ಟಿ, ನಿರ್ದೇಶಕರಾದ ಶಾಂತ ಶೆಟ್ಟಿ, ವಿಜಯ ಶೆಟ್ಟಿ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಅಜಿತ್ ಶೆಟ್ಟಿ, ಉಪಾಧ್ಯಕ್ಷರಾದ ಜಯಂತ್ ಶೆಟ್ಟಿ ಕುಂಟಿನಿ, ಯುವ ವಿಭಾಗದ ಅಧ್ಯಕ್ಷ ಅಜಯ್ ಶೆಟ್ಟಿ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ವಸುಧಾ ಪಿ ಶೆಟ್ಟಿ, ಉಪಾಧ್ಯಕ್ಷೆ ರಂಜಿತಾ ಶೆಟ್ಟಿ, ಕಾರ್ಯದರ್ಶಿ ಸಂಸ್ಕೃತಿ ರೈ, ಕೋಶಾಧಿಕಾರಿ ವಿಂದ್ಯಾ ಶೆಟ್ಟಿ, ಜತೆ ಕಾರ್ಯದರ್ಶಿ ಪವಿತ್ರಾ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಜಯಲಕ್ಷ್ಮೀ ಸಮಾನಿ, ಕ್ರೀಡಾ ವಿಭಾಗ ಸಂಚಾಲಕಿ ಉಷಾ ಶೆಟ್ಟಿ, ನಿರ್ದೇಶಕರಾದ ಸೌಮ್ಯಶ್ರೀ ಶೆಟ್ಟಿ, ಶುಭ ಶೆಟ್ಟಿ, ಶ್ರೇಯಾ ಶೆಟ್ಟಿ, ಸರಿತಾ ಶೆಟ್ಟಿ ಉಪಸ್ಥಿತರಿದ್ದರು.













