ಪುತ್ತೂರು : ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿನ.1 ರಂದು ಆಚರಿಸಲಾಗುವ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿ ಸಾಧಕರಿಗೆ ಮತ್ತು ಒಂದು ಸಂಸ್ಥೆಗೆ `ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್, ಸಮಿತಿ ಸಂಚಾಲಕರಾದ ಕ್ಷೇತ್ರ ಶಿಕ್ಷಣಾಧಿಕಾರಿಯವರು, ಸಮಿತಿ ಸದಸ್ಯರಾದ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿದ್ದ ಆಯ್ಕೆ ಸಮಿತಿಯಲ್ಲಿ ಚರ್ಚಿಸಿ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಿಂದ ನಾಮನಿರ್ದೇಶನಗೊಂಡ 11 ಮಂದಿ ಸಾಧಕರನ್ನು ಮತ್ತು ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಸಾಧಕರು :
ಮುರ ಎಂಪಿಎಂ ವಿದ್ಯಾಲಯದ ಸಂಚಾಲಕ ಎಂ.ಪಿ. ಅಬೂಬಕ್ಕರ್ (ಶಿಕ್ಷಣ ಕ್ಷೇತ್ರ), ಸ್ಯಾಕ್ಸೋಫೋನ್ ವಾದಕ ಉಮೇಶ್ ದೇವಾಡಿಗ( ವಾದ್ಯ-ಸಂಗೀತ), ಬನ್ನೂರು ನೆಕ್ಕಿಲ ನಿವಾಸಿ ಬಿ. ಶೇಖರ ಭಂಡಾರಿ (ಯಕ್ಷಗಾನ), ರವಿಚಂದ್ರ ರೈ ಮುಂಡೂರು (ರಂಗಭೂಮಿ), ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ (ಮಕ್ಕಳ-ಸಾಹಿತ್ಯ), ಶೇಷಪ್ಪ ಕಜೆಮಾರ್(ಪತ್ರಿಕೋದ್ಯಮ-ಸಾಹಿತ್ಯ), ತನುಜಾ ಕ್ಷೇವಿಯರ್ (ದಿವ್ಯಾಂಗ ಮಕ್ಕಳ ಸೇವೆ), ನಯನಾ ರೈ ನೆಲ್ಲಿಕಟ್ಟೆ (ಸಮಾಜಸೇವೆ),
ಶಶಿಧರ ರೈ ಕುತ್ಯಾಳ (ಪತ್ರಿಕೋದ್ಯಮ), ವಿದ್ವಾನ್ ದೀಪಕ್ ಕುಮಾರ್ (ಭರತನಾಟ್ಯ), ಧನ್ವಿ ರೈ ಕೆ. ಕೋಟೆ ಮನೆ (ಬಾಲ ಪ್ರತಿಭೆ), ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ವಚನಾ ಜಯರಾಮ್ (ಸಂಘ ಸಂಸ್ಥೆ).














